ಕಾರ್ಕಳ: ಭಂಡಾರಿ ಸಮಾಜ ಸಂಘ ಕಾರ್ಕಳ ಇದರ ವಾರ್ಷಿಕ ಮಹಾಸಭೆ,ಸತ್ಯನಾರಾಯಣ ಪೂಜೆ, ಸನ್ಮಾನ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಡಿ.26 ರಂದು ಮಂಗಳವಾರ ಕಾಬೆಟ್ಟು ಶ್ರೀವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ನಡೆಯಿತು.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ್ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿ,ಸಮಾಜ ಬಾಂಧವರ ಒಗ್ಗೂಡುವಿಕೆಗೆ ಕರೆ ನೀಡಿ ಯುವ ಸಮುದಾಯದ ಪಾಲ್ಗೊಳ್ಳುವಿಕೆಯ ಅವಶ್ಯಕತೆಯ ಬಗ್ಗೆ ವಿವರಿಸಿ,ಸಮಾಜದವರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬ ಸಲಹೆ ನೀಡಿ, ದೇವಸ್ಥಾನದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಲು ಕರೆ ನೀಡಿದರು.
ಸಂಘದ ಅಧ್ಯಕ್ಷ ಶೇಖರ್ ಹೆಚ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಹಾಗೂ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಎಲ್ಲರ ಕ್ರಿಯಾಶೀಲ ಭಾಗವಹಿಸುವಿಕೆ ಮತ್ತು ತನು ಮನ ಧನದ ಸಹಕಾರ ನೀಡಿದ್ದಲ್ಲಿ ಮುನ್ನಡೆಯಲು ಸಾದ್ಯ ಎಂದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಮಹಾಮಂಡಲದ ಅಧ್ಯಕ್ಷ ಶಶಿಧರ್ ಕೆ ಭಂಡಾರಿ, ಭಂಡಾರಿ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ಬಂಡಾರಿ ನಿಂಜೂರು, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ ಹಿರೇಬೆಟ್ಟು, ಮೂಡುಬಿದ್ರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಯೋಗೇಶ್ ಕೆ ಭಂಡಾರಿ, ಬೆಳ್ತಂಗಡಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಸದಾನಂದ ಭಂಡಾರಿ, ಯುವ ವೇದಿಕೆ ಅಧ್ಯಕ್ಷ ಸುಪ್ರೀತ್ ಭಂಡಾರಿ,ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಉಪಸ್ಥಿತರಿದ್ದರು.
ವೃತ್ತಿ ನಿರತ ಹಿರಿಯ ನಾಗರಿಕ ಮುಂಡ್ಕೂರು ಕೊರಗಪ್ಪ ಭಂಡಾರಿ ಮತ್ತು ಅಂಡಾರು ಸದಾಶಿವ ಭಂಡಾರಿ, ಸಾಧಕರಾದ ದರ್ಶಿತ್ ಭಂಡಾರಿ ಕಾಬೆಟ್ಟು ಸನ್ಮಾನಿಸಲಾಯಿತು.
ಸುಮನ ಕೃಷ್ಣ ಭಂಡಾರಿ, ರೇಷ್ಮಾ ಸುದರ್ಶನ ಭಂಡಾರಿ, ಲತಾ ಹರೀಶ್ ಭಂಡಾರಿ ಸಭೆಗೆ ಸನ್ಮಾನ ಪತ್ರವನ್ನು ವಾಚಿಸಿದರು.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 75% ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ರೇಖಾ ಸಂತೋಷ್ ರವರು ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.
ಮಂಗಳೂರಿನಲ್ಲಿ ನಡೆದ ಭಂಡಾರಿ ಸ್ಪೋರ್ಟ್ಸ್ ಮೀಟ್ ನಲ್ಲಿ ಕ್ರಿಕೆಟ್ ಮತ್ತು ರಿಲೇಯಲ್ಲಿ ಪ್ರಥಮ ಬಹುಮಾನ ಪಡೆದ ಶರತ್ ಮತ್ತು ಪ್ರಜ್ವಲ್ ತಂಡವನ್ನು ಅಭಿನಂದಿಸಲಾಯಿತು.
ಗೌರವಾಧ್ಯಕ್ಷ ಶಶಿಧರ್ ಕೆ ಭಂಡಾರಿಯವರು ಮುಂದಿನ ಎರಡು ವರ್ಷದ ಅವಧಿಗೆ ಭಂಡಾರಿ ಸಂಘದ ಅಧ್ಯಕ್ಷರಾಗಿ ಶೇಖರ್ ಹೆಚ್ ಭಂಡಾರಿ ಮತ್ತು ತಂಡ, ಮಹಿಳಾ ಸಂಘದ ಅಧ್ಯಕ್ಷರಾಗಿ ವೀಣಾ ರಾಜೇಶ್ ಭಂಡಾರಿ ಮತ್ತು ತಂಡ, ಯುವ ವೇದಿಕೆ ಅಧ್ಯಕ್ಷರಾಗಿ ಪವನ್ ಭಂಡಾರಿ ಮತ್ತು ತಂಡ ವನ್ನು ಸಭೆಯ ಸರ್ವಾನುಮತದ ಆಯ್ಕೆಯೊಂದಿಗೆ ಮಾಡಲಾಯಿತು.
ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ವಾಚಿಸಿದರು ಖಜಾಂಚಿ ಕೃಷ್ಣ ಭಂಡಾರಿ ಯವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಮಹಾಸಭೆಯ ಅನುಮೋದನೆ ಪಡೆದರು.
ಕಾರ್ಯದರ್ಶಿ ವಿಶ್ವನಾಥ ಭಂಡಾರಿಯವರ ವಂದಿಸಿದರು. ವೀಣಾ ರಾಜೇಶ್ ಮತ್ತು ರೇಷ್ಮಾ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ