ನವದೆಹಲಿ : ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವತೆಯನ್ನು ವಿಕೃತವಾಗಿ ಚಿತ್ರಿಸಿತ್ತು. ಇದಕ್ಕೆ ಭಾರತೀಯರು ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತ ಉಕ್ರೇನ್ ಸರ್ಕಾರ ಭಾರತೀಯರ ಕ್ಷಮೆ ಕೇಳಿದೆ. ಅಲ್ಲದೆ, ಯುರೋಪ್‌ನ ರಾಷ್ಟ್ರ ವಿಶಿಷ್ಟವಾದ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಭಾರತದಿಂದ ಬೆಂಬಲವನ್ನು ಹೆಚ್ಚು ಪ್ರಶಂಸಿಸುತ್ತದೆ” ಎಂದು ತಿಳಿಸಿದ್ದಾರೆ.
ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವತೆಯನ್ನು ವಿಕೃತವಾಗಿ ಚಿತ್ರಿಸಿದ ನಂತರ ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ರಕ್ಷಣಾ ಸಚಿವಾಲಯವು ಕಾಳಿ ದೇವಿಯನ್ನು “ವಿಕೃತ ರೀತಿಯಲ್ಲಿ” ಚಿತ್ರಿಸಿರುವುದನ್ನು ಉಕ್ರೇನ್ “ವಿಷಾದಿಸುತ್ತದೆ” ಮತ್ತು ಯುರೋಪಿಯನ್ ದೇಶವು “ವಿಶಿಷ್ಟ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಭಾರತದಿಂದ ಬೆಂಬಲವನ್ನು ಹೆಚ್ಚು ಪ್ರಶಂಸಿಸುತ್ತದೆ” ಎಂದು ಎಮಿನ್ ಝಪರೋವಾ ಟ್ವೀಟ್ ಮಾಡಿದ್ದಾರೆ.