ಮೂಡುಬಿದಿರೆ : ವಿಪರೀತ ಗಾಳಿ ಮಳೆಯಿಂದಾಗಿ ಕಾವೂರು ಬಿಜಿಎಸ್ ಪ್ರೌಢಶಾಲೆ ಬಳಿ ಮನೆಗೆ ಬೃಹತ್ ಮರ ಉರುಳಿಬಿದ್ದು ಮನೆಸಂಪೂರ್ಣ ಹಾನಿಗೀಡಾಗಿದ್ದು, ಮನೆಯ ಸದಸ್ಯರು ಗಾಯಗೊಂಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡ ಸಂತ್ರಸ್ತ ಕುಟುಂಬ ಸದಸ್ಯರ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ನೆರವಾಗುವ ಭರವಸೆ ನೀಡಿದರು.