Share this news

ಕುಂದಾಪುರ: :ಜಿಲ್ಲಾ ಭಜನಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೈಕರ ಪೂಜಾರಿ ಗುಲ್ವಾಡಿ, ಹಾಗೂ ಕುಂದಾಪುರ ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷರಾದ ನಿತಿನ್ ವಿಠಲವಾಡಿ ಇವರ ಮಾರ್ಗದರ್ಶನದಲ್ಲಿ ಭಜನಾ ಒಕ್ಕೂಟದ ಮಾದರಿ ಹಾಗೂ ಪ್ರೇರಣಾ ಕಾರ್ಯಕ್ರಮವಾದ ಮನೆ ಮನೆ ಅಂಗಳದಿ ಭಜನೆ ಕಾರ್ಯಕ್ರಮವನ್ನು ಹಾಲಾಡಿ ವಲಯದ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಜನ್ನಾಡಿ ಇವರು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಗಣಪ ಮೊಗವೀರ ರಾಜನ್ ಬೆಟ್ಟು ಅವರ ಮನೆಯಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ತಂಡದ ಭಜನಾ ಗುರುಗಳಾದ ಆನಂದ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಜನಾ ಗುರುಗಳಾದ ರಾಘವೇಂದ್ರ ಹಾಲಾಡಿ, ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅತುಲ್ ಕುಮಾರ್ ಶೆಟ್ಟಿ, ಭಜನಾ ಒಕ್ಕೂಟ ಹಾಲಾಡಿ ವಲಯ ಅಧ್ಯಕ್ಷೆ ಸುಶೀಲ ಎ ಶೆಟ್ಟಿ, ಜಟ್ಟಿಗೇಶ್ವರ ಭಜನಾ ಮಂಡಳಿ ಕಾರ್ಯದರ್ಶಿ ಪಲ್ಲವಿ ಪ್ರಶಾಂತ್, ಕೋಶಾಧಿಕಾರಿ ದಿವಾಕರ ಆಚಾರ್ಯ, ಪೋಷಕರು ಹಾಗೂ ಭಜನಾ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *