ನಕ್ರೆ ಪೊಸನೊಟ್ಟು ನಿವಾಸಿ ಶೇಖರ ನಾಯ್ಕ್ ಹಾಗೂ ಸಮೀಪದ ನಿವಾಸಿ ಶ್ರೀನಿವಾಸ ಆಚಾರ್ಯ ಸ್ನೇಹಿತರಾಗಿದ್ದು ಪ್ರತಿದಿನ ಭೇಟಿಯಾಗುತ್ತಿದ್ದರು. ಅದರಂತೆ ಮಾರ್ಚ್.20 ರಂದು ಶ್ರೀನಿವಾಸ ಆಚಾರ್ಯ ಅವರು ಸ್ನೇಹಿತ ಶೇಖೃ ನಾಯ್ಕ್ ರೊಂದಿಗೆ ರಾತ್ರಿ ತಮ್ಮ ಮನೆ ಅಂಗಳದಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಮನೆಯಲ್ಲಿದ್ದ ಅವರ ಹೆಂಡತಿಯ ತಮ್ಮ ಜಗದೀಶ ಆಚಾರ್ಯ ಎಂಬವರು ಏಕಾಏಕಿ ಬಂದವರು ಶ್ರೀನಿವಾಸ ಆಚಾರ್ಯ ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆದಾಗ ಶ್ರೀನಿವಾಸ ಆಚಾರ್ಯ ಅವರ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಅವರ ಪತ್ನಿ ಜಗದೀಶನನ್ನು ತಡೆದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಶ್ರೀನಿವಾಸ ಆಚಾರ್ಯರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಶ್ರೀನಿವಾಸ ಆಚಾರ್ಯರವರು ತನ್ನ ಸ್ನೇಹಿತನೊಂದಿಗೆ ತನ್ನ ವಿಚಾರವೇ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ದ್ವೇಷದಿಂದ ಜಗದೀಶ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.