ನವದೆಹಲಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಪಾರ ಪ್ರಗತಿ ಸಾಧಿಸುತ್ತಿದೆ. ಯುವಕರ ಶಕ್ತಿ ಸಾಮರ್ಥ್ಯವನ್ನು ಉತ್ತಮ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಗಾಧ ಬದಲಾವಣೆಯನ್ನು ಕಂಡಿದೆ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ವಿಶ್ವದ ನಂಬರ್ ವನ್ ರಾಷ್ಟ್ರವಾಗಲಿದೆ ಭಾರತ ತಂತ್ರಜ್ಞಾನದ ನೇತೃತ್ವ ವಹಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿ,ದೇಶದ ಅಭಿವೃದ್ದಿಯ ವಿಚಾರದಲ್ಲಿ ಯುವಕರ ಶಕ್ತಿಯ ಮೇಲೆ ನನಗೆ ಅಗಾಧ ವಿಶ್ವಾಸವಿದೆ. ಭಾರತ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೇತೃತ್ವ ವಹಿಸಲಿದೆ. ಕಳೆದ ವರ್ಷ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ದೇಶವನ್ನು ಹಲವು ರಾಷ್ಟ್ರಗಳ ನಾಯಕರು ಶ್ಲಾಘಿಸಿದರು.ಭಾರತದ ಸಣ್ಣಸಣ್ಣ ನಗರಗಳು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿವೆ ಇದರ ಪರಿಣಾಮವಾಗಿ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಸ್ಟಾರ್ಟಪ್ ದೇಶವಾಗಿ ಹೊರಹೊಮ್ಮಿದ್ದು ಇದರಿಂದ ನಮ್ಮ ಯುವಕರಿಗೆ ಹೊಸ ಅವಕಾಶ ಸಿಕ್ಕಂತಾಗಿದೆ ಎಂದರು.
ನಮ್ಮ ಸರ್ಕಾರದ ನೀತಿಯು ಯುವಶಕ್ತಿಗೆ ಬಲ ನೀಡಲಿದೆ. ಕೋವಿಡ್ ಸಂದರ್ಭದಲ್ಲೂ ನಮ್ಮ ಸಾಮರ್ಥ್ಯವನ್ನು ತೋರಿಸಿದ್ದೇವೆ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕತೆ ಇನ್ನೂ ಚೇತರಿಕೆ ಕಂಡಿಲ್ಲ ಕಠಿಣ ಸಂದರ್ಭದಲ್ಲೂ ಕೂಡ ಆರ್ಥಿಕತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಭಾರತದ ವೈವಿಧ್ಯತೆಯನ್ನು ಇಡೀ ವಿಶ್ವ ಬೆರವುಗಣ್ಣಿನಿಂದ ನೋಡುತ್ತಿದೆ ಮುನ್ನುಗ್ಗುತ್ತಿರುವ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
2014ರಲ್ಲಿ ದೇಶದ ಜನರು ಒಂದು ಬಲಿಷ್ಠ ಸರ್ಕಾರ ರಚಿಸಿದ್ದಾರೆ ದೇಶದ ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಪ್ರತಿ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರತ್ಯೇಕ ಸಹಕಾರ ಇಲಾಖೆಯನ್ನು ಸ್ಥಾಪಿಸಿದ್ದೇವೆ. ರಾಷ್ಟ್ರ ಮೊದಲು ಎಂಬುದು ನಮ್ಮ ಸರ್ಕಾರದ ಮೂಲ ಮಂತ್ರವಾಗಿದ್ದು ವಿಶ್ವಕರ್ಮ ಜಯಂತಿ ದಿನ ವಿಶ್ವಕರ್ಮ ಯೋಜನೆ ಜಾರಿಗೆ ಗೊಳಿಸುತ್ತೇವೆ ಎಂದು ಮೋದಿ ತಿಳಿಸಿದರು.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತು ಮಾತನಾಡಿದ ಪ್ರಧಾನಿ,ಇಡೀ ದೇಶವೇ ಮಣಿಪುರದಲ್ಲಿ ಶಾಂತಿಸ್ಥಾಪನೆಗಾಗಿ ನಿಲ್ಲಿಲ್ಲಲಿದೆ. ಆದರೆ ಕೆಲವು ವಿರೋಧಿಶಕ್ತಿಗಳು ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳ್ನು ಸಹಿಸಲು ಸಾಧ್ಯವಿಲ್ಲ ಎಚ್ಚರಿಕೆ ನೀಡಿದರು.







