ನವದೆಹಲಿ : ಕೇಂದ್ರ ಸರ್ಕಾರ ಸಣ್ಣ ವ್ಯಾಪಾರಿಗಳಿಗೆ ಈ ವರ್ಷ ಡಿಜಿಟಲ್ ಸಾಲ ಸೇವೆಗಳನ್ನ ಆರಂಭಿಸಲಿದೆ ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದರು.
ಡಿಜಿಟಲ್ ಪಾವತಿ ಉತ್ಸವದಲ್ಲಿ ಮಾತನಾಡಿದ ಅವರು, ಈ ಸೇವೆಗಳ ಮೂಲಕ, ಸಣ್ಣ ಮತ್ತು ಬೀದಿ ವ್ಯಾಪಾರಿಗಳು ದೊಡ್ಡ ಬ್ಯಾಂಕ್ಗಳಿAದ ಸಾಲ ಪಡೆಯಬಹುದು. ಯುಪಿಐ ಸೇವೆಯಂತೆ ಇದನ್ನ ಸಹ ಪರಿಚಯಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಯಲ್ಲಿ ಇದೊಂದು ಪ್ರಮುಖ ಸಾಧನೆ ಎಂದು ಬಣ್ಣಿಸಿದರು.
ನಾವು ಈ ವರ್ಷ ಡಿಜಿಟಲ್ ಸಾಲ ಸೇವೆಯನ್ನ ಪ್ರಾರಂಭಿಸುತ್ತೇವೆ. ಮುಂದಿನ 10-12 ವರ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಇದನ್ನ ಸಂಪೂರ್ಣವಾಗಿ ಜಾರಿಗೆ ತರಲಿದೆ. 2023ರಲ್ಲಿ ಡಿಜಿಟಲ್ ಕ್ರೆಡಿಟ್ ವ್ಯವಸ್ಥೆಯನ್ನ ಸಂಪೂರ್ಣವಾಗಿ ಜಾರಿಗೆ ತರುವ ಗುರಿ ಹೊಂದಿದ್ದೇವೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ ಮಾತನಾಡಿ, ಯುಪಿಐ ಜಾಗತಿಕ ಪಾವತಿ ಉತ್ಪನ್ನವಾಗಲಿದೆ. ಇನ್ನು ಈ ಉದ್ದೇಶಕ್ಕಾಗಿ ಎನ್ಪಿಸಿಐ ಈಗಾಗಲೇ ನೇಪಾಳ, ಸಿಂಗಾಪುರ ಮತ್ತು ಭೂತಾನ್ ನಂತಹ ದೇಶಗಳೊಂದಿಗೆ ಪಾಲುದಾರಿಕೆಯನ್ನು ಪ್ರಾರಂಭಿಸಿದೆ. ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ್, ಯುಎಇ, ಯುಕೆ, ಯುಎಗಳ 10 ದೇಶಗಳ ಅನಿವಾಸಿ ಭಾರತೀಯರಿಗೆ ಯುಪಿಐ ಸೇವೆಗಳು ಲಭ್ಯವಿರುತ್ತವೆ ಎಂದು ಹೇಳಿದ್ದಾರೆ.
ನೈಸರ್ಗಿಕ ಭಾಷಾ ಸಾಫ್ಟ್ವೇರ್ ಬಾಶಿನಿ, ಯುಪಿಐ ಏಕೀಕರಣ. ದೇಶದ 18 ಭಾಷೆಗಳಲ್ಲಿ ಮಾತನಾಡುವ ಮೂಲಕ ಒಬ್ಬರು ಪಾವತಿಗಳನ್ನ ಮಾಡಬಹುದು. ಡಿಜಿಟಲ್ ಕ್ರೆಡಿಟ್ನಲ್ಲಿ ಇದು ಉತ್ತಮ ಸಾಧನೆಯಾಗಿದೆ. ಇದರಿಂದ ಫುಟ್ಪಾತ್ ಕೆಲಸಗಾರನನ್ನ ಬ್ಯಾಂಕ್ ನೊಂದಿಗೆ ಸಂಪರ್ಕಿಸಲು ಸುಲಭವಾಗುತ್ತದೆ.