ಮಂಗಳೂರು : ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದ್ದು, ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್‌ವಾದಿಗಳ ಕೈವಾಡವಿದೆಯೇ ಎಂದು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಮ್. ಆರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲ ಸಮನ್ವಯಕರಾದ ಪವಿತ್ರಾ ಕುಡ್ವ, ವಿಶ್ವ ಹಿಂದೂ ಪರಿಷತ್ತಿನ ದಿನೇಶ್, ಹಿಂದೂ ಮಹಾಸಭಾದ ಲೋಕೇಶ್ ಉಳ್ಳಾಲ, ಉದ್ಯಮಿ ಭಾಸ್ಕರ್ ಕೋಲ್ನಾಡ್, ಧರ್ಮ ಪ್ರೇಮಿಗಳಾದ ಸುರೇಶ್ ಪಡುಕೋಣಾಜೆ, ಬಾಲಗಂಗಾಧರ್ ಕೋಡಿಕಲ್, ಶಶಿಧರ್ ಬಾಳಿಗ, ಹಿಂದೂ ಜನಜಾಗೃತಿ ಸಮಿತಿಯ ಗಣೇಶ್ ಸಾಲಿಯನ್, ಉಮೇಶ್ ಆಚಾರ್ಯ ಮರಕಡ, ಸುಧಾಕರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.