Share this news

ಬೆಂಗಳೂರು : ವಿದ್ಯುತ್ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಹಾಲಿನ ದರ ಏರಿಕೆಗೆ  ಹಾಲು ಒಕ್ಕೂಟಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ. ನಂದಿನಿ ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಪಟ್ಟು ಹಿಡಿದಿವೆ. ಲೀಟರ್ ಹಾಲಿನ ದರದ ಮೇಲೆ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿದಿನ 15 ರಿಂದ 16 ಲಕ್ಷ ಪ್ರತಿನಿತ್ಯ ನಷ್ಟವಾಗುತ್ತಿದೆ. ಪ್ರತಿ ಲೀಟರ್ ಹಾಲಿಗೆ ಮಾರಾಟ ದರದ ಮೇಲೆ 5 ರೂ. ಹೆಚ್ಚಳ ಮಾಡಲು ಅವಕಾಶ ಕೊಡಬೇಕು ಎಂದು ಹಾಲು ಒಕ್ಕೂಟಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಇದೀಗ ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲು ಮುಂದಾಗಿದ್ದ ಹಾಲು ಒಕ್ಕೂಟಕ್ಕೆ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ ಧನ ಕಡಿತ ಮಾಡದಂತೆ ಸೂಚನೆ ನೀಡಿದ್ದರು. ಹೀಗಾಗಿ ಕಡಿತಗೊಳಿಸಿದ ದರವನ್ನು ಮತ್ತೆ ರೈತರಿಗೆ ನೀಡಲು ಒಕ್ಕೂಟಗಳು ಮುಂದಾಗಿವೆ. ಆದರೆ ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ತಯಾರಾಗಿದೆ.

ನಂದಿನಿ ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಪಟ್ಟು ಹಿಡಿದಿವೆ. ಲೀಟರ್ ಹಾಲಿನ ದರದ ಮೇಲೆ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಹೇಳಿದ್ದಾರೆ. ರಾಜ್ಯದ 15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ. ಸದ್ಯ ಹಾಲು ಮಾರಾಟ ಪ್ರತಿ ಲೀ. 39 ರೂಪಾಯಿ ಇದೆ. ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಕೊಡುತ್ತಿದ್ದೇವೆ. ಮಾರಾಟಗಾರರಿಗೆ ಪ್ರತಿ ಲೀ.ಗೆ 2 ರೂ ಕಮೀಷನ್ ಕೊಡಬೇಕು. ಮಧ್ಯ ಅಂತರ ಕೇವಲ 1.50 ಪೈಸೆ ಇದೆ. ಇಷ್ಟು ಲಾಭದಿಂದ ನಾವು ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಹಾಲು ಮಾರಾಟದಿಂದ ಪ್ರತಿದಿನ 15 ರಿಂದ 16 ಲಕ್ಷ ನಷ್ಟವಾಗುತ್ತದೆ. ಪ್ರತಿ ಲೀ ಗೆ ಮಾರಾಟ ದರದ ಮೇಲೆ 5 ರುಪಾಯಿ ಹೆಚ್ಚಳ ಮಾಡಲು ಅವಕಾಶ ಕೊಡಬೇಕು. ಹೆಚ್ಚಳ ಮಾಡದಿದ್ದರೆ ಒಕ್ಕೂಟಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ. ಬೇರೆ ರಾಜ್ಯಗಳಲ್ಲಿ ಪ್ರತಿ ಲೀ. ಹಾಲಿನ ದರ 51 ರೂಪಾಯಿ ಇದೆ. ಆದ್ರೆ ನಮ್ಮ ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಹಾಲಿದ ದರ ಪರಿಷ್ಕರಣೆ ಮಾಡಿಲ್ಲ. ಈ ಬಾರಿ ಹಾಲಿನ ದರ ಪರಿಷ್ಕರಣೆ ಆಗಲೇಬೇಕು. ಈ ವಾರ ಸಿಎಂ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ರೆಡಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *