Share this news

ಬೆಂಗಳೂರು:ಬ್ಯಾಂಕ್ ಖಾತೆಯಿಂದ ಗ್ರಾಹಕನಿಗೆ ತಿಳಿಯದೇ ಆಗುವ ಹಣ ವರ್ಗಾವಣೆಗೆ ಆಯಾ ಬ್ಯಾಂಕುಗಳೇ ಹೊಣೆ ಎಂದು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.

ಶ್ರೀರಾಮಪುರ ನಿವಾಸಿ ಲೋಕೇಶ್ ಎಂಬುವರ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ(SBI) ಉಳಿತಾಯ ಖಾತೆಯಿಂದ ಅವರ ಗಮನಕ್ಕೆ ಬಾರದೇ 2020ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬೇರೆ ಬೇರೆ ದಿನಗಳಲ್ಲಿ 28,800 ಕಡಿತವಾಗಿತ್ತು. ಈ ವೇಳೇ ಈ ಬಗ್ಗೆ ಲೋಕೇಶ್‌ ಬ್ಯಾಂಕ್ ಮತ್ತು ಸೈಬರ್‌ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ಸುತ್ತೋಲೆ ಪ್ರಕಾರ, ಗ್ರಾಹಕನ ತಪ್ಪಿನಿಂದಲೇ ಮೋಸದ ವ್ಯವಹಾರ ನಡೆದಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಬ್ಯಾಂಕ್‌ ವಿಫಲವಾಗಿರುವ ಹಿನ್ನಲೆಯಲ್ಲಿ ಗ್ರಾಹಕ ಲೋಕೇಶ್‌ ಅವರಿಗೆ ಕಡಿತವಾಗಿದ್ದ 8,800 ರೂಪಾಯಿ ಜತೆಗೆ ದೂರುದಾರನ ಕಾನೂನು ಹೋರಾಟದ ಶುಲ್ಕವಾಗಿ 3 ಸಾವಿರ ಮತ್ತು ಪರಿವಾರ ರೂಪದಲ್ಲಿ 23 ಸಾವಿರ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಇದಲ್ಲದೇ ಗ್ರಾಹಕನಿಗೆ ಗೊತ್ತಿಲ್ಲದೇ ನಡೆಯುವ ಆನ್ ಲೈನ್ ಹಣ ವಂಚನೆಗೆ ನೇರವಾಗಿ ಬ್ಯಾಂಕುಗಳೇ ಹೊಣೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ

 

 

 

 

 

 

 

 

Leave a Reply

Your email address will not be published. Required fields are marked *