ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಮುಂದುವರೆಸಿರುವ ವಿಕ್ರಂ ಲ್ಯಾಂಡರ್, ಇದೀಗ ಚಂದ್ರನ ಮೇಲ್ಮೆ ಸಮೀಪದಲ್ಲೆ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೊ, ರೇಡಿಯೋ ಅನಾಟಮಿ ಆಫ್ ಮೂನ್ ಬೌಂಡ್ ಹೈಪರ್‌ಸೆನ್ಸೆಟಿವ್ ಲೋನೋಸ್ಪಿಯರ್ ಆ್ಯಂಡ್ ಅಟ್‌ಮಾಸ್ಪಿಯರ್- ಲ್ಯಾಂಗ್‌ಮುಯಿರ್ ಪ್ರೋಬ್ (ಆರ್‌ಎಎಂಬಿಎಚ್-ಎಲ್‌ಪಿ) ಉಪಕರಣವು, ಚಂದ್ರನ ಮೇಲ್ಮೆಗೆ ಸಮೀಪದ ಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಲೂನಾರ್ ಪ್ಲಾಸ್ಮಾ ಪರಿಸರವನ್ನು ಪತ್ತೆ ಹಚ್ಚಿದೆ ಎಂದು ಹೇಳಿದೆ.
ಈ ಮಾಹಿತಿಯ ಪ್ರಾಥಮಿಕ ವಿಶ್ಲೆಷಣೆ ಅನ್ವಯ, ಚಂದ್ರನ ಮೇಲ್ಮೆ ಪ್ರದೇಶದಲ್ಲಿನ ಪ್ಲಾಸ್ಮಾವು ಅತ್ಯಂತ ವಿರಳ ಪ್ರಮಾಣದಲ್ಲಿದೆ. ಅದರ ಸಾಂದ್ರತೆ ಪ್ರಮಾಣವು ಪ್ರತಿ ಕ್ಯುಬಿಕ್ ಮೀಟರ್‌ಗೆ 5ರಿಂದ 30 ದಶಲಕ್ಷ ಎಲೆಕ್ಟ್ರಾನ್‌ಗಳಷ್ಟಿದೆ. ಈ ಸಂಶೋಧನೆಯು, ಲೂನಾರ್ ನಿಯರ್ ಸರ್‌ಫೇಸ್ ಪ್ರದೇಶದಲ್ಲಿನ ಅನಿಲಗಳು ಹೇಗೆ ಚಾರ್ಚ್ ಆಗುತ್ತದೆ ಎನ್ನುವ ವಿಷಯದ ಸಮಗ್ರ ಕ್ರೊ?ಡೀಕರಣಕ್ಕೆ ನೆರವಾಗುತ್ತದೆ. ಅಲ್ಲದೆ, ಈ ಅಧ್ಯಯನವು ಲೂನಾರ್ ಪ್ಲಾಸ್ಮಾ ಪ್ರದೇಶದಲ್ಲಿ ರೇಡಿಯೋ ಅಲೆಗಳ ಸಂವಹನ ಮೇಲೆ ಉಂಟಾಗುವ ಶಬ್ದ ಮಾಲಿನ್ಯವನ್ನು ತಡೆಯಲು ನೆರವಾಗುತ್ತದೆ. ಜೊತೆಗೆ ಈ ಕುರಿತ ಜ್ಞಾನವು ಮುಂಬರುವ ಉಡ್ಡಯನಗಳ ವೇಳೆ ಇಂಥ ಶಬ್ದ ಮಾಲಿನ್ಯ ತಡೆದು ಸುಗಮ ಸಂವಹನಕ್ಕೆ ನೆರವಾಗಬಲ್ಲದು ಎಂದು ವಿಶ್ಲೆಷಿಸಲಾಗಿದೆ.