Share this news

ನವದೆಹಲಿ: ಚಂದ್ರಯಾನ-3 ಯಶಸ್ಸಿನ ಸಿಹಿಯನ್ನು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳ ಷೇರುಗಳು ಕೂಡಾ ಅನುಭವಿಸಿವೆ. ಚಂದ್ರಯಾನ-3 ಯಶಸ್ವಿಯಾಗಬಹುದು ಎಂಬ ನಿರೀಕ್ಷೆಗಳ ನಡುವೆಯೇ ಈ ಎರಡು ವಲಯಕ್ಕೆ ಸೇರಿದ ಹಲವು ಕಂಪನಿಗಳ ಷೇರು ಮೌಲ್ಯ ಬುಧವಾರ ಭರ್ಜರಿ ಏರಿಕೆ ಕಂಡವು. ಸೆಂಟಮ್ ಎಲೆಕ್ಟ್ರಾನಿಕ್ಸ್ ಶೇ.15, ಪರಸ್ ಡಿಫೆನ್ಸ್ ಶೇ.5.47, ಎಂಟಿಎಆರ್ ಟೆಕ್ನಾಲಜೀಸ್ ಶೇ.4.84, ಎಚ್‌ಎಎಲ್ ಶೇ.3.57, ಭಾರತ್ ಫೋರ್ಜ್ ಶೇ.2.82, ಅಸ್ತ್ರ ಮೈಕ್ರೋವೇವ್ ಶೇ.1.72, ಎಲ್ ಆ್ಯಂಡ್ ಟಿ ಶೇ.1.42ರಷ್ಟು ಏರಿಕೆ ಕಂಡವು.

ಚAದ್ರಯಾನ-3 ನೌಕೆ ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಇಸ್ರೋದ ಮುಖ್ಯಸ್ಥ ಎಸ್.ಸೋಮನಾಥ್‌ಗೆ ಕರೆ ಮಾಡಿ ಇಸ್ರೋದಲ್ಲಿ ನೀವು ಮಾಡಿರುವ ಅದ್ಭುತ ಕಾರ್ಯಕ್ಕೆ ನಾನು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಧನ್ಯವಾದ ತಿಳಿಸುತ್ತೇನೆ ಎಂದರು. ಜೊತೆಗೆ ನಿಮ್ಮ ಹೆಸರು ಸೋಮನಾಥನಲ್ಲೇ ಚಂದ್ರನ ನಂಟಿದೆ. ಹೀಗಾಗಿ ನಿಮ್ಮ ಕುಟುಂಬ ಸದಸ್ಯರು ಇಂದು ಹೆಚ್ಚು ಸಂಭ್ರಮಿಸಿರಬಹುದು ಎಂದು ನಗೆ ಚಟಾಕಿ ಹಾರಿಸಿದರು.

ಇದೀಗ ವಿಕ್ರಮ್ ಲ್ಯಾಂಡರ್​ನಿಂದ ಹೊರಬಂದಿರುವ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ವಾಕ್ ಮಾಡಿದೆ ಎಂದು  ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇಸ್ರೋ ಮೇಡನ್ ಇನ್ ಇಂಡಿಯಾ ಮೇಡ್ ಫಾರ್ ಮೂನ್ ಎಂದು ಟ್ವೀಟ್ ಮಾಡಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ.

ಭಾರತದ ಚಂದ್ರಯಾನ-3 ನೌಕೆಯ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆದ ಬಳಿಕ ಹಲವು ದೇಶಗಳು ಮತ್ತು ಅಲ್ಲಿನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಇಸ್ರೋಗೆ ಶುಭಾಶಯ ಕೋರಿವೆ. ಚಂದ್ರನಲ್ಲಿ ನೌಕೆ ಇಳಿಸಿದ ನಾಲ್ಕನೇ ದೇಶವಾದ ಭಾರತಕ್ಕೆ ಶುಭಾಶಯಗಳು ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಟ್ವೀಟ್ ಮಾಡಿದ್ದರೆ, ಬ್ರಿಟನ್‌ನ ಬಾಹ್ಯಾಕಾಶ ಸಂಸ್ಥೆಯು ಇತಿಹಾಸ ನಿರ್ಮಾಣ ಮಾಡಿದ ಇಸ್ರೋಗೆ ಅಭಿನಂದನೆಗಳು ಎಂದಿದೆ.

ಯುರೋಪ್ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3 ತಂಡಕ್ಕೆ ಅಭಿನಂದನೆಗಳು ಎಂದಿದೆ. ಇನ್ನು ನಿಮ್ಮ ಯಶಸ್ವಿ ಚಂದ್ರಯಾನ-3 ದಕ್ಷಿಣ ಧ್ರುವದ ಲ್ಯಾಂಡಿAಗ್‌ಗಾಗಿ ಅಭಿನಂದನೆಗಳು. ಅಲ್ಲದೇ ಯಶಸ್ವಿ ಚಂದ್ರಯಾನ ನಡೆಸಿದ ಭಾರತಕ್ಕೆ ಶುಭಾಶಯಗಳು ಎಂದು ನಾಸಾದ ಆಡಳಿತಾಧಿಕಾರಿ ನೆಲ್ಸನ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *