ಶ್ರೀಹರಿಕೋಟಾ: ಭಾರತದ ಚಂದ್ರಯಾನ-3 ಹಂತ ಹಂತವಾಗಿ ಯಶಸ್ಸು ಪಡೆಯುತ್ತಿದ್ದು,ಇದೀಗ ಚಂದ್ರನ 153 ಕಿಮೀ * 163 ಕಿಮೀ ಕಕ್ಷೆಗೆ ಸೇರಿಸುವ ಕಾರ್ಯ ಯಶಸ್ವಿಯಾಗಿದೆ. ನೌಕೆಯಿಂದ ವಿಕ್ರಂ ಲ್ಯಾಂಡರ್ ಬೇರ್ಪಡಿಸಿ ಚಂದ್ರನ ವೃತ್ತಕಾರಾದ ಕಕ್ಷೆಗೆ ಸೇರಿಸಲಾಗಿದೆ. ಈ ಮೂಲಕ ಚಂದ್ರಯಾನ 3 ಐದನೇ ಹಾಗೂ ಅಂತಿಮ ಸುತ್ತುವ ಮಾನುವರ್ ಪೂರ್ಣಗೊಳಿಸಿದೆ ಎಂದು ಇಸ್ರೋ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.
ಇಂದು (ಆ.16) ಬೆಳಗ್ಗೆ 8.30ಕ್ಕೆ ಚಂದ್ರಯಾನ3 ನೌಕೆಯನ್ನು ಚಂದ್ರನ ಅಂತಿಮ ಕಕ್ಷೆಗೆ ಸೇರಿಸಲು ಇಸ್ರೋ ತಯಾರಿ ಮಾಡಿಕೊಂಡಿತ್ತು. ಇದರಂತೆ ಯಶಸ್ವಿ ಫೈರಿಂಗ್ ಮೂಲಕ 153 ಕಿಮೀ * 163 ಕಿಮೀ ಕಕ್ಷೆಗೆ ಸೇರಿಸಲಾಗಿದೆ. ಇದರೊಂದಿಗೆ ಚಂದ್ರನ ಬಂಧಿತ ಕುಶಲತೆಯು ಪೂರ್ಣಗೊಂಡಿದೆ.ಇದೀಗ ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕ ಪ್ರಯಾಣಕ್ಕೆ ಇಸ್ರೋ ತಯಾರಿ ಮಾಡಿಕೊಳ್ಳುತ್ತಿದೆ. ಆಗಸ್ಟ್ 17 ರಂದು ಲ್ಯಾಂಡರ್ ಮಾಡ್ಯೂಲ್ನ್ನು ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಡಿಸಲು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
ನೌಕೆಯಿಂದ ಬೇರ್ಪಡಿಸಿದ ವಿಕ್ರಂ ಲ್ಯಾಂಡರ್ ಇದೀಗ ಚಂದ್ರನ ವೃತ್ತಕಾರಾದ ಕಕ್ಷೆಗೆ ಸೇರಿಸಲಾಗಿದೆ.ಈ ಪ್ರಕ್ರಿಯೆಯಿಂದ ನೌಕೆಯು, ಚಂದ್ರನಿAದ ಕೇವಲ 100 ಕಿ.ಮೀ ದೂರದ ಪ್ರದೇಶವನ್ನು ಪ್ರವೇಶಿಸಿದೆ. ಪ್ರೊಪಲ್ಷನ್ ಮಾಡೆಲ್ನಿಂದ ಲ್ಯಾಂಡರ್ ಮತ್ತು ರೋವರ್ ಒಳಗೊಂಡಿರುವ ಲ್ಯಾಂಡಿAಗ್ ಮಾಡೆಲ್ ಬೇರ್ಪಟ್ಟಿದೆ. ನಂತರದಲ್ಲಿ ಲ್ಯಾಂಡಿAಗ್ ಮಾಡೆಲ್ ಡೀಬೂಸ್ಟ್ (ವೇಗ ಕಡಿಮೆ ಮಾಡುವ ಪ್ರಕ್ರಿಯೆ) ಪ್ರಕ್ರಿಯೆಗೆ ಒಳಪಡಲಿದೆ. ಈ ಮೂಲಕ ಆ.23ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ಗೆ ಪ್ರಯತ್ನ ಮಾಡಲಿದೆ.
ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿAದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ರೋವರ್ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ. ಕ್ಷಣಕ್ಷಣಕ್ಕೂ ಭಾರತದ ಚಂದ್ರಯಾನ-3 ನೌಕೆ ಚಂದ್ರನಿಗೆ ಹತ್ತಿರವಾಗುತ್ತಿದೆ. ಮುಂದಿನ ಹಂತಗಳಿಗೆ ಚಂದ್ರಯಾನ ನೌಕೆ ಸಜ್ಜಾಗುತ್ತಿದ್ದು ಭಾರತ ಇತಿಹಾಸ ನಿರ್ಮಿಸಲಿದೆ.



