Share this news

ಬೆಂಗಳೂರು: ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್​ಗೆ ಕ್ಷಣಗಣನೆ ಆರಂಭವಾಗಿದ್ದು, ನೆಹರು ತಾರಾಲಯದಲ್ಲಿ ಲ್ಯಾಂಡಿಂಗ್ ವೀಕ್ಷಣೆಗೆ ತಯಾರಿ ಮಾಡಲಾಗಿದೆ. 500ಕ್ಕೂ ಹೆಚ್ಚು ಜನರು ತಾರಾಲಯಕ್ಕೆ ಆಗಮಿಸುತ್ತಿದ್ದು, ಸಂಜೆ 5:10 ರಿಂದ ಲೈವ್​ನಲ್ಲಿ ವೀಕ್ಷಣೆಗೆ ಅವಕಾಶವಿರಲಿದೆ. ಹೀಗಾಗಿ ನೆಹರು ತಾರಾಲಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್​ಎಸ್ ಬೋಸ್ ರಾಜ್​​ ಆಗಮಿಸಿದ್ದಾರೆ. ಕೊನೆ ದೃಶ್ಯದವರೆಗೂ ಸಾರ್ವಜನಿಕರೊಂದಿಗೆ ವೀಕ್ಷಣೆ ಮಾಡಲಿದ್ದಾರೆ.

ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆ. ಕಾರ್ಯಾಚರಣೆಯ ನೇರ ಪ್ರಸಾರ ಸಂಜೆ 5.20ರಿಂದ ಆರಂಭವಾಗಲಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದಿರನನ್ನು ಸ್ಪರ್ಶ ಮಾಡಲಿದೆ ಎಂದು ಇಸ್ರೋ ಟ್ವೀಟ್​ ಮಾಡಿದೆ.

ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಲೈವ್ ಆರಂಭವಾಗಲಿದೆ. ಮೊದಲು ಬೆಂಗಳೂರಿನ ಬಳ್ಳಾಲದ ಇಸ್ರೋಗೆ ಮಾಹಿತಿ ಬರುತ್ತೆ. ಬಳಿಕ ವಿಜ್ಞಾನಿಗಳು ಟ್ರ್ಯಾಕಿಂಗ್ ಸೆಂಟರ್​ನಲ್ಲಿ ಮಾಹಿತಿ ಪಡೆಯುತ್ತಾರೆ.  ಬಳಿಕ ನೆಹರು ತಾರಾಲಯದಲ್ಲಿ ಲೈವ್ ಆರಂಭವಾಗುತ್ತೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಕಾಯುತ್ತಿದ್ದಾರೆ 

Leave a Reply

Your email address will not be published. Required fields are marked *