ಕಾರ್ಕಳ : ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಸಮಾಜ ಕಟ್ಟುವ ಸತ್ಪ್ರಜೆಗಳಾಗಿ ಬೆಳೆಯಬೇಕು. ಆ ಮುಖೇನ ಸಮಾಜ ಅಭಿವೃದ್ಧಿ ಹೊಂದಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣದ ಜೊತೆಗೆ ಸರಕಾರಿ ಸೌಲಭ್ಯಗಳು ಸಿಗಬೇಕು. ಆಗ ಮಾತ್ರ ಸಾಮಾಜಿಕ ಸಮಾನತೆಗೆ ಅರ್ಥ ಬರುತ್ತದೆ ಎಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಕಾರ್ಕಳ ತಾಲೂಕಿನ ಮಾಳ ಪೇರಡ್ಕದಲ್ಲಿ ಫೆ.26 ರಂದು ಜರುಗಿದ ಜಿಲ್ಲಾ ಮಲೆಕುಡಿಯ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಉಡುಪಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ವ್ಯವಸ್ಥಾಪಕರಾದ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ತಮ್ಮ ಇಲಾಖೆಯಿಂದ ಮಲೆಕುಡಿಯರಿಗೆ ಸಿಗಬೇಕಾದ ಯಾವುದೇ ರೀತಿಯ ಸೌಲಭ್ಯವನ್ನು ವಿಳಂಬ ಮಾಡದೆ ಕೊಡಲಾಗಿದೆ. ಇನ್ನು ಮುಂದೆಯೂ ತಮ್ಮ ಇಲಾಖೆಯಿಂದ ಸಿಗುವಂತಹ ಸೌಲಭ್ಯವನ್ನು ಸಂಘಟನೆಯ ಮುಖಾಂತರ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಸಾಮಾಜಿಕ ಹೋರಾಟಗಾರರಾದ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ, ಪಶ್ಚಿಮಘಟ್ಟ ವ್ಯಾಪ್ತಿಗೆ ಸಂಬAಧಿಸಿದ ಜನವಿರೋಧಿ ಯೋಜನೆಗಳು ಬಂದಾಗ ಅವರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಜಿಲ್ಲಾ ಮಲೆಕುಡಿಯ ಸಂಘವು ಹೋರಾಟ ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕೂಡಾ ತಮ್ಮ ನ್ಯಾಯಬದ್ಧ ಹೋರಾಟಗಳಲ್ಲಿ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಗಂಗಾಧರ ಗೌಡ ಈದು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ಬೆಳವಣಿಗೆಗೆ ಪ್ರತಿಯೊಬ್ಬರ ಕೊಡುಗೆಯನ್ನು ನೆನಪಿಸಿ ಸಮುದಾಯದ ಇನ್ನಷ್ಟು ಅಭಿವೃದ್ಧಿಗೆ ಜನತೆಯ ಸಹಕಾರವನ್ನು ಕೋರಿದರು
ಈ ಸಂದರ್ಭದಲ್ಲಿ ಕಾರ್ಕಳ ಕೆ.ಎಮ್.ಇ.ಎಸ್ ಶಿಕ್ಷಣ ಸಂಸ್ಥೆಗಳ ಕೆ. ಎಸ್. ಇಮ್ತಿಯಾಜ್ ಅಹಮ್ಮದ್, ಉಡುಪಿ ಜಿಲ್ಲಾ ಮರಾಠಿ ಸಂಘದ ನಿಕಟಪೂರ್ವ ಅಧ್ಯಕ್ಷ ಅನಂತ ನಾಯ್ಕ್, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಜಿಲ್ಲಾ ಮಲೆಕುಡಿಯ ಸಂಘದ ಸ್ಥಾಪಕಾಧ್ಯಕ್ಷ ಶ್ರೀಧರ ಗೌಡ ಈದು, ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಕುಮಾರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿವೃತ್ತ ಹಿರಿಯ ಮ್ಯಾನೇಜರ್ ಪ್ರಮೇಶ್ವರ ಉಜಿರೆ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪುತ್ರನ್, ಕರ್ನಾಟಕ – ಕೇರಳ, ಅಖಿಲ ಕೇರಳ ಮಲೆಕುಡಿ – ಕುಡಿಯ ಸೇವಾ ಸಂಘದ ಅಧ್ಯಕ್ಷ ಮಾಧನ ಕೊಜಪ್ಪೆ, ದ.ಕ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು. ಅಶಕ್ತರಿಗೆ (ಅನಾರೋಗ್ಯ ಪೀಡಿತರಿಗೆ) ಸಹಾಯ ಧನವನ್ನು ವಿತರಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಖಿಡಿue ಐove ಓeveಡಿ ಇಟಿಜ ಎನ್ನುವ ತುಳು ಆಲ್ಬಮ್ ಸಾಂಗ್ ನ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಗಂಗಾಧರ ಗೌಡ ಈದು ಸ್ವಾಗತಿಸಿ, ಪ್ರಸ್ತಾವನೆಗೈದರು. ಕುಮಾರಿ ರಾಧಾ ಪ್ರಾರ್ಥಿಸಿದರು. ಕುಮಾರಿ ಸೌಮ್ಯ ವರದಿ ವಾಚಿಸಿದರು. ಸರೋಜಿನಿ ಸದಾನಂದ ವಂದಿಸಿ, ಪುಷ್ಪಾ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಮುದಾಯದವರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಂಡಿತು.