Share this news

ನವದೆಹಲಿ : ವಾರಣಾಸಿಯ ಜ್ಞಾನವಾಪಿ ಮಸೀದಿಯ ‘ವುಜುಖಾನಾ’ ಸಮೀಕ್ಷೆಗೆ ಸಂಬಂಧಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ ಮತ್ತು ಇತರ ವಿರೋಧ ಪಕ್ಷಗಳಿಗೆ ನೋಟಿಸ್ ನೀಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜ್ಞಾನವಾಪಿ ಸಮೀಕ್ಷೆಯ ವರದಿಯು ಪರಿಗಣಿಸಲು ಯೋಗ್ಯವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ಏಕಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಶೃಂಗಾರ್ ಗೌರಿ ಪೂಜಾ ದಾವೆ 2022 ರಲ್ಲಿ (ಪ್ರಸ್ತುತ ವಾರಣಾಸಿ ನ್ಯಾಯಾಲಯದಲ್ಲಿ ಬಾಕಿ ಇದೆ) ಐವರು ವಾದಿಗಳಲ್ಲಿ ಒಬ್ಬರಾದ ರಾಖಿ ಸಿಂಗ್ ಈ ಅರ್ಜಿಯನ್ನು ಸಲ್ಲಿಸಿದ್ದರು.
ಹೈಕೋರ್ಟ್ ಬಾರ್ ಅಂಡ್ ಬೆಂಚ್ ವರದಿಯ ಪ್ರಕಾರ, ‘ಶಿವಲಿಂಗ’ ಇದೆ ಎಂದು ಹೇಳಲಾದ ಪ್ರದೇಶವನ್ನು ಹೊರತುಪಡಿಸಿ, ಜ್ಞಾನವಾಪಿ ಮಸೀದಿಯ ಅಬ್ಲುಷನ್ ಕೊಳವನ್ನು (ವುಜುಖಾನಾ) ಸಮೀಕ್ಷೆ ಮಾಡಲು ಎಎಸ್ಐಗೆ ನಿರ್ದೇಶನ ನೀಡುವಂತೆ ರಾಖಿ ಸಿಂಗ್ ಹೈಕೋರ್ಟ್’ಗೆ ಮನವಿ ಮಾಡಿದ್ದಾರೆ.
ಜ್ಞಾನವಾಪಿ‌ ಮಸೀದಿಯಲ್ಲಿ ಸಿಕ್ಕಿರುವ ಪುರಾತನ ಹನುಮ, ಗಣೇಶ ವಿಗ್ರಹಗಳು, ಶಿವಲಿಂಗಗಳು ಪುರಾತತ್ವ ಇಲಾಖೆಯ ಸರ್ವೇಯಲ್ಲಿ ಪ್ರಬಲ ಸಾಕ್ಷ್ಯಗಳಾಗಿದ್ದವು

 
 

 

 
 

 
 

 

 
 

Leave a Reply

Your email address will not be published. Required fields are marked *