ಕಾರ್ಕಳ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದ ಬಳಿಕ ಕೆಲ ಸಚಿವರು, ನಾಯಕರು ಮತ್ತು ಆ ನಾಯಕರ ಚೇಲಾಗಳು ಶಿಷ್ಟಾಚಾರ ಮೀರಿ ವರ್ತಿಸುತ್ತಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ತಮ್ಮ ಇಲಾಖೆಗಳಿಗೆ ಸಂಬAಧಪಡದ, ಸಂಘರ್ಷಕ್ಕೆ ಕಾರಣವಾಗಬಹುದಾದ ಹೇಳಿಕೆಗಳನ್ನು ನೀಡಿ ಹಲವು ಸಲ ಸರಕಾರಕ್ಕೆ ಮುಜುಗರವನ್ನೂ ತಂದಿಟ್ಟಿದ್ದಾರೆ. ಸೋತ ಪಕ್ಷವನ್ನು ಟೀಕಿಸುವ ಭರದಲ್ಲಿ ಅವರು ನೀಡುತ್ತಿರುವ ಹೇಳಿಕೆಗಳು ರಾಜಕೀಯ ಶಿಷ್ಟಾಚಾರದ ಎಲ್ಲ ಮಿತಿಗಳನ್ನು ಮೀರುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೇಳಿದ್ದಾರೆ.

ಅದರಲ್ಲೂ ಪ್ರಿಯಾಂಕ್ ಖರ್ಗೆ ತನಗೆ ಸಂಬAಧವೇ ಇಲ್ಲದ ಗೃಹ ಇಲಾಖೆಗೆ ಸಂಬAಧಿಸಿದ ವಿಚಾರಗಳಲ್ಲಿ ಮೂಗು ತೂರಿಸುತ್ತಿರುವುದು ಬಹಿರಂಗವಾಗಿಯೇ ಕಾಣಿಸುತ್ತಿದೆ. ಬಜರಂಗದಳ ಮತ್ತು ಆರ್‌ಎಸ್‌ಎಸ್ ನಿಷೇಧಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಕೂಡಲೇ ಹೇಳಿದ್ದು ಪ್ರಿಯಾಂಕ್ ಖರ್ಗೆ. ಆಗ ಅವರು ಬರೀ ಸಚಿವರಾಗಿದ್ದರಷ್ಟೇ ಖಾತೆ ಹಂಚಿಕೆಯೂ ಆಗಿರಲಿಲ್ಲ. ಅದೇ ರೀತಿ ಗೋ ಸಂರಕ್ಷಕರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಪೊಲೀಸರಿಗೆ ಆದೇಶಿಸುವುದು, ಬಾಲ ಕತ್ತರಿಸುತ್ತೇವೆ, ದಮ್ಮಿದ್ದರೆ ತಡೆಯಿರಿ ನೋಡೋಣ ಎಂದೆಲ್ಲ ಪ್ರಚೋದನಕಾರಿಯಾಗಿ ಸವಾಲೊಡ್ಡುವುದನ್ನೆಲ್ಲ ಖರ್ಗೆ ಸಹಿತ ಹಲವು ಸಚಿವರು ಮತ್ತು ಶಾಸಕರು ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ

ಇದೇ ಚಾಳಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲೂ ಕಂಡು ಬರುತ್ತಿದೆ. ಕಾರ್ಕಳ ಮತ್ತು ಬೆಳ್ತಂಗಡಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ತಾವು ಸೋತಿದ್ದರೂ ಶಿಷ್ಟಾಚಾರದ ಉಲ್ಲಂಘನೆ ಮಾಡುತ್ತಿರುವುದು ಮಾತ್ರವಲ್ಲದೆ ಜನರಿಂದ ಆಯ್ಕೆಯಾಗಿರುವ ಶಾಸಕರ ಹಕ್ಕುಗಳ ಸ್ಪಷ್ಟ ಅತಿಕ್ರಮಣ ಮಾಡುತ್ತಿದ್ದಾರೆ. ಕಾರ್ಕಳದಲ್ಲಿ ಪರಾಜಿತ ಅಭ್ಯರ್ಥಿ ತಾನೇ ಎಂದು ಹಿಂಬಾಲಕರ ದಂಡು ಕಟ್ಟಿಕೊಂಡು ತಾಲೂಕು ಕಚೇರಿ, ಸರಕಾರಿ ಆಸ್ಪತ್ರೆ ಮತ್ತಿತರ ಸರಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಬೆಳ್ತಂಗಡಿಯ ಮಾಜಿ ಶಾಸಕರೊಬ್ಬರು ತಾನು ಸೂಪರ್ ಎಂಲ್‌ಎ ಎಂದು ಭಾವಿಸಿ ಎಲ್ಲೆಡೆ ತಮ್ಮದೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಮಹಾವೀರ ಹೆಗ್ಡೆ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸರಕಾರಿ ವ್ಯವಸ್ಥೆಯಲ್ಲಿರುವ ಕುಂದುಕೊರತೆಗಳನ್ನು ಟೀಕಿಸುವ, ಸಂಬAಧಪಟ್ಟವರ ಗಮನಕ್ಕೆ ತರುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಆದರೆ ಅದಕ್ಕೆ ಅದರದ್ದೇ ಆದ ನೀತಿ ನಿಯಮ ಮತ್ತು ಶಿಷ್ಟಾಚಾರ ಇದೆ. ಸೌಲಭ್ಯಗಳಿಲ್ಲ ಇಲ್ಲ ಎಂದು ತಾವೇ ಹಿಂಬಾಲಕರ ದಂಡು ಕಟ್ಟಿಕೊಂಡು ಹೋಗಿ ಅಧಿಕಾರಿಗಳನ್ನು, ವೈದ್ಯರನ್ನು ದಬಾಯಿಸುವುದು ಅಥವಾ ವಿವರಣೆ ಕೇಳುವುದು ಸರಿಯಾದ ವಿಧಾನವಲ್ಲ. ಇದು ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಮಾಡಬೇಕಾದ ಕೆಲಸ ಮತ್ತು ಇದು ಅವರಿಗೆ ಸಂವಿಧಾನದತ್ತವಾಗಿ ಸಿಕ್ಕಿರುವ ಅಧಿಕಾರ. ಈ ಜನಪ್ರತಿನಿಧಿ ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದಾದರೆ ಸರಕಾರಕ್ಕೆ ಮನವಿ ಸಲ್ಲಿಸುವುದು ಅಥವಾ ಪ್ರತಿಭಟನೆ ಮಾಡುವ ಹಕ್ಕು ಜನಸಾಮಾನ್ಯರಿಗೆ ಇದೆ. ಇದು ಬಿಟ್ಟು ವ್ಯವಸ್ಥೆ ಸರಿ ಇಲ್ಲ ಎಂಬ ಕಾರಣಕ್ಕೆ ನಮ್ಮ ಸರಕಾರ ಇದೆ ಎಂದು ಸೋತಿದ್ದರೂ ಅಧಿಕಾರ ಚಲಾಯಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆಯಾಗುತ್ತದೆ. ಯಾವುದೇ ಸರಕಾರಿ ಅಧಿಕಾರಿಯನ್ನು ಬಹಿರಂಗವಾಗಿ ದಬಾಯಿಸುವುದು ಅಥವಾ ಅವರು ಕರ್ತವ್ಯದಲ್ಲಿರುವಾಗ ಹೋಗಿ ವಿಚಾರಣೆ ನಡೆಸುವುದು ಕರ್ತವ್ಯಕ್ಕೆ ಅಡ್ಡಿಪಡಿಸುವ ಅಪರಾಧಕ್ಕೆ ಸಮಾನವಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆ ಇರಬೇಕು ಎಂದು ಕಿಡಿಕಾರಿದ್ದಾರೆ.

ಎದುರಾಳಿಗಳು ಸೋತಿದ್ದಾರೆ ಎಂದು ಅವರನ್ನು ಬಾಯಿಗೆ ಬಂದAತೆ ಟೀಕಿಸುವುದು, ಲೇವಡಿ ಮಾಡುವುದು, ನಿಂದಿಸುವುದು ಆರೋಗ್ಯಕರ ರಾಜಕೀಯದ ಲಕ್ಷಣವಲ್ಲ. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ರಾಜಕೀಯ ಚಕ್ರ ಸದಾ ತಿರುಗುತ್ತಲೇ ಇರುತ್ತದೆ ಎಂದು ಮಹಾವೀರ ಹೆಗ್ಡೆ ಮಾರ್ಮಿಕವಾಗಿ ನುಡಿದಿದ್ದಾರೆ.

