Share this news

ಕಾರ್ಕಳ: ಕೆಪಿಟಿಸಿಎಲ್ ಗೆ ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಬಾಡಿಗೆ ಪಡೆಯುವ ವಿಚಾರದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಆರೋಪಿಸಿದ್ದಾರೆ.


ಈ ಕುರಿತು ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಇಂಧನ ಇಲಾಖೆಯಲ್ಲಿ ಕರ್ತವ್ಯ ನಿರ್ಬಹಿಸುವ ಅಧಿಕಾರಿಗಳ ಓಡಾಟಕ್ಕಾಗಿ ಬಡವಾಹನ ಮಾಲಕರು ಕರಾರು ಆಧಾರದಲ್ಲಿ ಮಾಸಿಕ ಸುಮಾರು 35 ಸಾವಿರ ಬಾಡಿಗೆಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದರು, ಆದರೆ ಸುನಿಲ್ ಕುಮಾರ್ ನಿಯಮಬಾಗಿರವಾಗಿ ಅವಧಿಗೂ ಮುನ್ನವೇ ಹಿಂದಿನ ಅಗ್ರಿಮೆಂಟ್ ರದ್ದುಪಡಿಸಿ,603 ವಾಹನಗಳನ್ನು ತನ್ನ ಆಪ್ತನ ಮಾಲಕತ್ವದ ಟ್ರಾವೆಲ್ ವರ್ಲ್ಡ್ ಸಂಸ್ಥೆಯ ಮೂಲಕ ಗುತ್ತಿಗೆಪಡೆದು ಮಾಸಿಕ 45 ಸಾವಿರ ಬಾಡಿಗೆ ಪಡೆದು ಅವರ ಆಪ್ತರ 60 ಖಾತೆಗೆ ಮಾಸಿಕ 25 ಸಾವಿರ ಕಮಿಷನ್ ಸಂದಾಯ ಮಾಡಿದ್ದಾರೆ. ಒಂದುವೇಳೆ ಇದು ಸುಳ್ಳಾದರೆ ಪ್ರಮಾಣ ಮಾಡುವ ಧೈರ್ಯ ಶಾಸಕರಿಗೆ ಇದೆಯೇ ಸವಾಲು ಹಾಕಿದ್ದಾರೆ.

ಕೇವಲ 60 ಜನ ಆಪ್ತರಿಗೆ ಬಾಡಿಗೆ ವಾಹನದ ಮೂಲಕ ಮಾಸಿಕ ಹಣಪಡೆಯುವ ಅವಕಾಶವೇ ಹಾಗಾದರೆ 60 ಜನರು ಮಾತ್ರ ಶಾಸಕರಿಗಾಗಿ ದುಡಿದವರೇ ಎಂದು ಪ್ರಶ್ನಿಸಿದ ಅವರು ಬಿಜೆಪಿ ಕಾರ್ಯಕರ್ತರಲ್ಲಿ ನಿಮ್ಮ ಬದ್ಧತೆಯ ಬಗ್ಗೆ ನನಗೆ ಗೌರವವಿದೆ, ಆದರೆ ಇನ್ನೂ ಸಮಯವಿದೆ ತಾವುಗಳು ಅತ್ಮವಿಮರ್ಶೆ ಮಾಡಿಕೊಳ್ಳಿ ಎಂದಿದ್ದಾರೆ. ಶಾಸಕರ ಮೇಲೆ ಭೃಷ್ಟಾಚಾರದ ಇಷ್ಟು ದೊಡ್ಡ ಅರೋಪ ಬರಲು ಕಾರಣವೇನು? ನಿಮ್ಮದೇ ಪಕ್ಷದ ಕೆಲವು ನಾಯಕರಿಗೆ ಅವರ ನಡೆಯ ಬಗ್ಗೆ ಬೇಸರವಿದೆ. ಅವರ ಸ್ವಾರ್ಥಕ್ಕೆ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಅವರ ಲಾಭಕ್ಕೆ ನಡೆಯುವ ಕಾರ್ಯಕ್ರಮಗಳಲ್ಲಿ ತಾವುಗಳು ಕೇವಲ ಸ್ವಯಂ ಸೇವಕನಾಗಿ ದುಡಿಯಲು ಮಾತ್ರ ಸೀಮಿತವಾಗುತ್ತೀರಿ ಅಷ್ಟೇ ಎಂದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಕಾರ್ಡಿನ ಫಲಾನುಭಾವಿಗಳು ತಾವೆಲ್ಲರೂ ಆಗುತ್ತೀರಿ ಎನ್ನುವುದು ನೆನಪಿರಲಿ. ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮ್ಮ ತಾಯಿಯ ಅಥವಾ ಅಕ್ಕನ ಖಾತೆಗೆ ಪ್ರತೀ ತಿಂಗಳು 2000 ಹಣ ಸಂದಾಯವಾಗುತ್ತದೆ, ಉಚಿತ ವಿದ್ಯುತ್ ಮೂಲಕ ನಿಮ್ಮ ಮನೆಯ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ನಿಮ್ಮ ಮನೆಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗೆ ಉದ್ಯೋಗ ಸಿಗುತ್ತದೆ ಹೀಗೆ ಅನೇಕ ಕಾಂಗ್ರೆಸ್ ಯೋಜನೆಗಳು ನಿಮ್ಮ ಮನೆ ತಲುಪಲಿದೆ. ಹಾಗಾಗಿ ಕಾರ್ಕಳದಲ್ಲಿ ಭೃಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಈ ಚುನಾವಣೆಯಲ್ಲಿ ತೋರಿಸಿ ಕೊಡೋಣ, ಇಲ್ಲವಾದರೆ ಭೃಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ ಎಂದು ಶುಭದ ರಾವ್ ಹೇಳಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಶೆಣೈ, ದಿನಕರ್ ಶೆಟ್ಟಿ ನಿಟ್ಟೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *