ಮೇದಕ್: ತೆಲಂಗಾಣದ ಮೇದಕ್ ಜಿಲ್ಲೆಯ ತೂಪ್ರಾನ್ ಪಟ್ಟಣದಲ್ಲಿ ಇಂದು ಬೆಳಗ್ಗೆ ವಾಯುಪಡೆಯ ವಿಮಾನ ಪತನಗೊಂಡಿದ್ದು,ಈ ದುರ್ಘಟನೆಯಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ದಿಂಡಿಗಲ್ ಜಿಲ್ಲೆಯ ಬಳಿಯ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಸಮಯದಲ್ಲಿ ಬೆಳಿಗ್ಗೆ 8.55 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪೈಲಟ್‌ಗಳಲ್ಲಿ ಒಬ್ಬ ಬೋಧಕ ಮತ್ತು ಒಬ್ಬ ಕೆಡೆಟ್ ಸೇರಿದ್ದಾರೆ.
ತೂಪ್ರಾನ್ ಬಳಿ ವಿಮಾನ ಪತನಗೊಂಡಿದೆ ಎಂದು ಮೆದಕ್ ಎಸ್ಪಿ ರೋಹಿಣಿ ತಿಳಿಸಿದ್ದಾರೆ. ಇದು ದುಂಡಿಗಲ್ ವಿಮಾನನಿಲ್ದಾಣದಿಂದ ಬಂದ ತರಬೇತಿ ವಿಮಾನವಾಗಿದೆ. ವಿಮಾನದೊಳಗೆ ಇಬ್ಬರು ಜನರಿದ್ದರು, ಒಬ್ಬ ತರಬೇತುದಾರ ಮತ್ತು ಒಬ್ಬ ಟ್ರೇನಿ. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಸುಳಿವು ತಂಡ ಸ್ಥಳದಲ್ಲಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ” ಎಂದು ಎಸ್ಪಿ ರೋಹಿಣಿ ಹೇಳಿದ್ದಾರೆ.