ಕಾರ್ಕಳ : ಶ್ರೀ ದುರ್ಗಾ ಪ್ರೆಂಡ್ಸ್ ಕೊರಚೊಟ್ಟು ಜೋಡುರಸ್ತೆ ಇವರ ಆಶ್ರಯದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಕಲೆ, ಕ್ರೀಡೆ, ಸಾಹಿತ್ಯ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾನ್ವಿತ 30 ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಮತ್ತು ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಕೊರಚೊಟ್ಟು ಮೈದಾನದಲ್ಲಿ ನಡೆಯಿತು.
ನಿವೃತ್ತ ಸೇನಾನಿ ಜಯ ಮೂಲ್ಯ ವಿದ್ಯಾರ್ಥಿಗಳಿಗೆ ಹಾರ,ಶಾಲು, ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಕ್ರೀಡಾಕೂಟದ ವಿಜೇತರಿಗೆ ಉದ್ಯಮಿ ಶಿವದೇವಾಡಿಗ ಬಹುಮಾನಗಳನ್ನು ವಿತರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಶಿಕ್ಷಕ ದಿನೇಶ್, ಮಾತನಾಡಿ ಹೊಸ ವರ್ಷಾಚರಣೆ ಎಂದರೆ ಕೇವಲ ಮೋಜು ಮಸ್ತಿ ಎಂದುಕೊAಡಿರುವ ಕಾಲಘಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ, ಪ್ರತಿಭೆಯನ್ನು ಗುರುತಿಸಿದರೆ ಮಾತ್ರ ನಿನ್ನಷ್ಟು ಪ್ತತಿಭೆಗಳು ಬೆಳಕಿಗೆ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಅರುಣ್ ಶೆಟ್ಟಿ, ಅರುಣ್ ದೇವಾಡಿಗ, ಸಂಸ್ಥೆಯ ಮುಖ್ಯಸ್ಥೆ ಪ್ರತಿಮಾ ಡಿಸೋಜ, ಮಹೇಶ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀವನ್ ಡಿಸಿಲ್ವಾ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು. ನಿಧಿ ಶೆಟ್ಟಿ ಕ್ರೀಡಾ ವಿಜೇತರ ಪಟ್ಟಿಯನ್ನು ವಾಚಿಸಿದರು, ರೇಷ್ಮಾ ಶೆಣೈ ಸ್ವಾಗತಿಸಿ, ಶುಭದರಾವ್ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಡಿಸೋಜ ವಂದಿಸಿದರು. ವಿನಯ ಶೆಟ್ಟಿ ಸಹಕರಿಸಿದರು. ಸಭಾಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.