ಕಾರ್ಕಳ: ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಹೆಸರು ಮರುನಾಮಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸುವವರು ಹಾಗೂ ಹೆಸರಲ್ಲೇನಿದೆ ಎನ್ನುವವರು ತಮ್ಮ ಹೆಸರುಗಳನ್ನು ರಾವಣ ದುಶ್ಯಾಸನ, ಘಟೋತ್ಕಚ ಒಸಾಮ ಬಿನ್ಲಾಡೆನ್ ಎಂದು ಬದಲಾಯಿಸಿಕೊಳ್ಳಬಹುದಲ್ಲವೇ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಇಂಡಿಯಾ ಬದಲಿಗೆ ದೇಶದ ಹೆಸರನ್ನು ಭಾರತ್ ಎಂದು ನಾಮಕರಣ ಮಾಡುವ ಪ್ರಸ್ತಾಪದ ಕುರಿತು ವಿರೋಧಕ್ಕೆ ಟ್ವಿಟರ್ ನಲ್ಲಿ ಕುಟುಕಿದ ಸುನಿಲ್, ಭಾರತ ಎಂದು ಹೆಸರು ಇಟ್ಟಾಗ ಮೂಡುವ ಭಾವ ಭಕುತಿಗಳೇ ಬೇರೆ,ಇದರಿಂದ ಸನಾತನ ಭಾರತ ವರ್ಷ ನಮ್ಮ ಮುಂದೆ ಸೃಷ್ಟಿಯಾಗುತ್ತದೆ.ಈ ಕಾರಣಕ್ಕಾಗಿಯೇ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಬರೆದ ಕವಿಗಳು ಇಂಡಿಯಾ ಬದಲು ಭಾರತ ಎಂಬ ಶಬ್ದ ಪ್ರಯೋಗ ಮಾಡಿರಬೇಕು ಎಂದಿದ್ದಾರೆ.
ನಾಡಗೀತೆಯಲ್ಲಿನ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಸಾಲು ಮಾತ್ರ ಸಾಕೇ ಅಥವಾ ಜಯ ಭಾರತ ಜನನಿಯ ತನುಜಾತೆ ಎನ್ನುವ ಸಾಲು ಬೇಕೋ ಎಂದು ಕಾಂಗ್ರೆಸ್ ವಿರುದ್ಧ ಟ್ವಿಟರ್ ನಲ್ಲಿ ಸುನಿಲ್ ಹರಿಹಾಯ್ದಿದ್ದಾರೆ.