ಕಾರ್ಕಳ : ತಾಲೂಕಿನ ಕುಕ್ಕುಜೆ ದೊಂಡೇರಂಗಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಸಂಘದ ಹದಿನೈದನೇ ವಾರ್ಷಿಕೋತ್ಸವು ಫೆ.25 ರಂದು ಜರುಗಿತು.
ಬೈರಂಪಳ್ಳಿ ಪಂಚಾಯತ್ ಅಧ್ಯಕ್ಷ ಜಿಯಾನಂದ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಸಂಘದ ಪ್ರಧಾನ ಕಛೇರಿ ಯಕ್ಷದೇಗುಲದಲ್ಲಿ ನೂತನ ವಾಚನಾಲಯವನ್ನು ಉದ್ಘಾಟಿಸಲಾಯಿತು. ಪ್ರಯಾಣಿಕರ ಅನುಕೂಲಕ್ಕಾಗಿ ಪೇಟೆಯ ಬಸ್ಸು ತಂಗುದಾಣಕ್ಕೆ ಕುಡಿಯುವ ನೀರಿನ ಘಟಕವನ್ನು ಒದಗಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳು, ಸಾಧಕರು, ದಾನಿಗಳನ್ನು ಗೌರವಿಸಲಾಯಿತು.
ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ ಅಧ್ಯಕ್ಷತೆಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಜಿಯಾನಂದ ಹೆಗ್ಡೆ, ಮಾಲತಿ ಕುಲಾಲ್,ರೇಖಾ,ಸಂಜೀವ ಪೂಜಾರಿ,ಜಗದೀಶ್ ಹೆಗ್ಡೆ,ಅಖಿಲೇಶ್ ಶೆಟ್ಟಿ,ಪಾರ್ವತಿ,ರವೀಂದ್ರ ಕಾಮತ್ ಉಪಸ್ಥಿತರಿದ್ದರು.
ಹರಿಪ್ರಸಾದ್ ಸ್ವಾಗತಿಸಿ, ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ ಬೆಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು, ದೀಪಕ್ ಕಾಮತ್ ವರದಿ ಮಂಡಿಸಿದರು.ದಿನೇಶ್ ಶೆಟ್ಟಿ ವಂದಿಸಿ, ಶಂಕರ ನಾಯ್ಕ್ ಮತ್ತು ವಿನಯ ಆರ್ ಭಟ್ ನಿರೂಪಿಸಿದರು.
ಸಂಘದ ಕಲಾವಿದರಿಂದ ಬಸವರಾಜ್ ಶೆಟ್ಟಿಗಾರ್ ವಿರಚಿತ ಅಮರಶಿಲ್ಪಿ ವೀರಶಂಭು ಕಲ್ಕುಡ ಯಕ್ಷಗಾನ ಪ್ರದರ್ಶನ ನಡೆಯಿತು.