ಕಾರ್ಕಳ: : ಇತಿಹಾಸ ಪ್ರಸಿದ್ದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಅದ್ದೂರಿ ಅಯನೋತ್ಸವ ಸಿರಿಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಸಂಪನ್ನಗೊAಡಿತು.
ನAದಳಿಕೆ ಚಾವಡಿ ಅರಮನೆಯಿಂದ ಸುಂದರರಾಮ್ ಹೆಗ್ಡೆಯವರನ್ನು ಮೆರವಣಿಗೆಯೊಂದಿಗೆ ಕರೆತರಲಾಯಿತು. ಅಯನೋತ್ಸವ, ಉತ್ಸವ ಬಲಿ, ಕೆರೆ ದೀಪೋತ್ಸವ, ಪಲ್ಲಕಿ ಸುತ್ತು, ಬಲ್ಲೇಶ್ವರ ಪೂಜೆ, ಕಟ್ಟೆಪೂಜೆ ಮಹೋತ್ಸವ ನಡೆಯಿತು.
ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ವೈಭವದ ಸಿರಿಜಾತ್ರಾ ವಿಧಿ ವಿಧಾನ ವೈಭವದಿಂದ ಜರುಗಿತು. ವಿವಿಧ ಕಲಾ ತಂಡಗಳು ಸಿರಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಉಡುಪಿ ದ.ಕ. ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತಾದಿಗಳು ಸಿರಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.