ಹಾಸನ: ಕಳೆದ ಬಾರಿ ನೀಡಿದ್ದ ಹೇಳಿಕೆಯಿಂದ ಪಕ್ಷದ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಇದೀಗ ಹೈಕಮಾಂಡ್ ವಿಚಾರವಾಗಿ ಮತ್ತೊಮ್ಮೆ ಧ್ವನಿ ಏರಿಸಿದ್ದು, ನನಗೆ ಯಾರು ಹೈಕಮಾಂಡ್ ಇಲ್ಲ, ನನಗೆ ನನ್ನ ಕ್ಷೇತ್ರದ ಜನರೇ ಹೈಕಮಾಂಡ್ ಎಂದು ಹೇಳಿದ್ದಾರೆ.
ಭಾನುವಾರ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ‘ನನಗೆ ನಾನೇ ಹೈಕಮಾಂಡ್, ನನಗೆ ಯಾರು ಹೈಕಮಾಂಡ್ ಇಲ್ಲ. ನನ್ನ ಹೈಕಮಾಂಡ್ ಆಗಿರುವುದು ನನ್ನ ಊರಿನ ಮತದಾರರು ಮಾತ್ರ’ ಎಂದು ಹೇಳಿದರು.
‘ಒಂದು ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಇರುತ್ತಾರೆ. ಅವರಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತೇನೆ. ಅವರ ಮಾತುಗಳನ್ನು ಆಲಿಸಬೇಕು, ಖಂಡಿತವಾಗಿ ಕೇಳ್ತೇವೆ. ಹೇಳಿದ ಮಾತುಗಳನ್ನು ಪಾಲಿಸುತ್ತೇವೆ. ಅದನ್ನು ಎಂದಿಗೂ ವಿರೋಧಿಸಲ್ಲ. ಆದ್ರೆ, ಅಂತಿಮವಾಗಿ ನನ್ನ ಕ್ಷೇತ್ರ ಮತದಾರರೇ ನನ್ನ ಹೈಕಮಾಂಡ್’ ಎಂದು ಹೇಳಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ