Share this news

ಉಜ್ಜೈನಿ: ಉತ್ತರ ಭಾರತದಲ್ಲಿ ನವರಾತ್ರಿಗೆ ಗರ್ಬಾ ನೃತ್ಯ ಅತ್ಯಂತ ವಿಶೇಷ ಹಾಗೂ ಮಹತ್ವದ್ದಾಗಿದೆ. ಸಾರ್ವಜನಿಕ ಗರ್ಬಾ ನೃತ್ಯದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಆದರೆ ಕಳೆದ ಹಲವು ವರ್ಷಗಳಿಂದ ಈ ಸಾರ್ವಜನಿಕವಾಗಿ ಆಯೋಜಿಸುವ ಗರ್ಬಾ ನೃತ್ಯದಲ್ಲಿ ಹಿಂದೂಯೇತರ ಯುವಕರು ಪಾಲ್ಗೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ. ಇಷ್ಟೇ ಅಲ್ಲ ಇದರಿಂದಾಗಿ ಅಹಿತಕರ ಘಟನೆಗಳು ನಡೆದ ಉದಾಹರಣೆಗಳೂ ಇವೆ. ಹೀಗಾಗಿ ಈ ಬಾರಿಯ ಗರ್ಬಾ ನೃತ್ಯ ಆಯೋಜಕರಿಗೆ ಕೆಲ ಹಿಂದೂ ಸಂಘಟೆಗಳು, ಹಿಂದೂ ಧಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದ್ದರು. ಆದ್ದರಿಂದ ಈ ಬಾರಿ ಉಜ್ಜೈನಿಯಲ್ಲಿ ಹೊಸ ನೀತಿ ಜಾರಿಗೊಳಿಸಲಾಗಿದ್ದು, ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳಲು ಯುವಕರು ಹಣೆಗೆ ತಿಲಕ ಇಟ್ಟಿರಲೇಬೇಕು. ಜೊತೆಗೆ ಆಧಾರ್ ಕಾರ್ಡ್ ತೋರಿಸಿ ಅದೇ ಪ್ರದೇಶದ, ಹಿಂದೂ ಎಂದು ಖಾತ್ರಿ ಪಡಿಸಿದರೆ ಮಾತ್ರ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

ಸಂಕಲ್ಪ ಸಂಸ್ಕೃತಿ ಸಂಸ್ಥೆ ಉಜ್ಜೈನಿಯಲ್ಲಿ ಅತೀ ದೊಡ್ಡ ಗರ್ಬಾ ನೃತ್ಯ ಆಯೋಜಿಸಿದೆ. ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳುವ ಹೆಣ್ಣುಮಕ್ಕಳ ಸುರಕ್ಷತೆ ನಮ್ಮ ಜವಾಬ್ದಾರಿ. ಹೀಗಾಗಿ ಕೆಲ ನೀತಿಗಳನ್ನು ಜಾರಿಗೊಳಿಸಿದ್ದೇವೆ. ಹಿಂದೂ ಹೆಣ್ಣುಮಕ್ಕಳ ಭವಿಷ್ಯದಲ್ಲಿ ಗರ್ಬಾ ನತ್ಯ ಕಪ್ಪು ಚುಕ್ಕೆ ಆಗಬಾರದು. ಗರ್ಬಾ ಕೇವಲ ನೃತ್ಯವಲ್ಲ ಭಗವಂತನ ಆರಾಧನೆಯಲ್ಲಿ ಒಂದು ಮಾರ್ಗ. ಕುಟುಂಬ ಸಮೇತ ಒಂದಾಗಿ, ವೈಷಮ್ಯ ಮರೆತು ಮಾ ದುರ್ಗೆಯ ಸ್ಮರಣೆ ಮಾಡುವುದಾಗಿದೆ. ಇಲ್ಲಿ ಇತರ ಪಂಥಗಳ ಜನರು ದುರ್ಗೆಯ ಆರಾಧನೆ, ನವರಾತ್ರಿ ಆರಾಧನೆ ಮಾಡುವುದಿಲ್ಲ. ಇಷ್ಟೇ ಅಲ್ಲ ಹಿಂದೂಯೇತರರು ಆಗಮಿಸಿ ಲವ ಜಿಹಾದ್ ಸೇರಿದಂತೆ ಹಲವು ಇತರ ಅಹಿತಕರ ಘಟನೆಗೆ ಕಾರಣರಾಗುತ್ತಿದ್ದಾರೆ ಎಂದು ಸಂಕಲ್ಪ ಸಂಸ್ಕೃತಿ ಸಂಸ್ಥೆ ಹೇಳಿದೆ. ಹೀಗಾಗಿ ನಿಯಮ ಉಲ್ಲಂಘಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಹಣೆಗೆ ತಿಲಕ ಇಟ್ಟಿರಬೇಕು. ತಿಲಕ ಇಡಲು ನಿರಾಕರಿಸುವ ವ್ಯಕ್ತಿಗೆ ಮಾ ದುರ್ಗೆಯ ಆರಾಧಿಸುವುದಿಲ್ಲ. ಹೀಗಾಗಿ ತಿಲಕ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

 

 

 

 

 

 

 

 

Leave a Reply

Your email address will not be published. Required fields are marked *