ಕಾರ್ಕಳ:ಕಳೆದ ಒಂದು ವಾರದಿಂದ ಪೆರ್ವಾಜೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವವು ಪೆರ್ವಾಜೆ ಸಮೀಪದ ಬಾವಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರ್ಕಳ ಪೆರ್ವಾಜೆಯ ನಿವಾಸಿ ಪ್ರೀತಮ್ ಭಟ್ (39) ಎಂಬವರು ನಾಪತ್ತೆಯಾಗಿದ್ದು, ಅವರಿಗಾಗಿ ಮನೆಮಂದಿ ತೀವೃ ಹುಡುಕಾಟ ನಡೆಸಿ ಬಳಿಕ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು.
ಇದೀಗ ಅವರ ಶವವು ಮನೆಯ ಸಮೀಪದ ಬಾವಿಯೊಂದರಲ್ಲಿ ಪತ್ತೆಯಾಗಿದೆ.
ಪ್ರೀತಮ್ ಭಟ್ ಕಾರ್ಕಳ ಆಭರಣ ಮೋಟಾರ್ಸ್ ನಲ್ಲಿ ಉದ್ಯೋಗಿಯಾಗಿದ್ದರು. ಇತ್ತೀಚೆಗೆ ಕೆಲ ಸಮಯದ ಹಿಂದೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ.
ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಅವರು ಮದ್ಯವ್ಯಸನಿಯಾಗಿದ್ದರು ಎನ್ನಲಾಗುತ್ತಿದೆ.
ಅವರು ಆಯತಪ್ಪಿ ಬಾವಿಗೆ ಬಿದ್ದಿರಬಹುದೇ ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ವಿಚಾರ ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ



