ಅಜೆಕಾರು : ಅಜೆಕಾರಿನ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ “ಶಾಲೊಮ್ ಪ್ರಗತಿ” ವಾಣಿಜ್ಯ ಸಂಕೀರ್ಣ ನಾಳೆ (ಏ.14) ಶುಭಾರಂಭಗೊಳ್ಳಲಿದೆ.
ಅಜೆಕಾರು ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ಪ್ರವೀಣ್ ಅಮೃತ್ ಮಾರ್ಟಿಸ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವರಾಮ ಜಿ ಶೆಟ್ಟಿ ಸೂಪರ್ ಮಾರ್ಕೆಟ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಂಡಾರು ಕರಿಯಾಲು ಶ್ರೀ ವಿಠಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾವೀರ ಹೆಗ್ಡೆ, ಎಣ್ಣೆಹೊಳೆ ಅರುಣ್ ಭಟ್, ಅಜೆಕಾರು ಅಪ್ಸರ ಟ್ರಾನ್ಸ್ಪೋರ್ಟ್ ನ ಶೇಕ್ ಉಮರ್ ಸಾಹೇಬ್, ಕೊಂಡಿಬೆಟ್ಟು ಕೃಷ್ಣ ಶೆಟ್ಟಿ, ಕುಕ್ಕುಂದೂರು ಗಣಿತನಗರ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಸುಧಾಕರ ಶೆಟ್ಟಿ ಅಜೆಕಾರು, ತೀರ್ಥಹಳ್ಳಿ ನ್ಯಾಷನಲ್ ಸೂಪರ್ ಬಜಾರ್ ನ ಸುಲೆಮಾನ್, ಯಶ್ವಂತ್ ಕೆ ಶೆಟ್ಟಿ ಮುಂಬೈ, ಮರ್ಣೆ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ, ಅಜೆಕಾರು ರಾಮಮಂದಿರ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಶೆಣೈ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಶಾಲೊಮ್ ಪ್ರಗತಿ ವಾಣಿಜ್ಯ ಸಂಕೀರ್ಣದ ಪಾಲುದಾರರಾದ ಸುಜಯ ಶೆಟ್ಟಿ ಮುನಿಯಾಲು, ಗುರುಪ್ರಸಾದ್ ಶೆಟ್ಟಿ ಹಾಗೂ ಹರೀಶ್ ಶೆಟ್ಟಿ ತಿಳಿಸಿದ್ದಾರೆ.