Share this news

ನವದೆಹಲಿ :ಗಗನಯಾನದ ಮೊದಲ ಹಂತದ ಪ್ರಯೋಗಕ್ಕೆ ಇಸ್ರೋ ಮುಂದಾಗಿದೆ. ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದ ಉಡಾವಣಾ ಕೇಂದ್ರದಿಂದ ನಾಳೆ ಬೆಳಗ್ಗೆ 8 ಗಂಟೆಗೆ ರಾಕೆಟ್​ ಉಡಾವಣೆಯಾಗಲಿದೆ. ಇದರ ನೇರಪ್ರಸಾರ 7.30ರಿಂದ ಪ್ರಾರಂಭವಾಗಲಿದೆ.

ಕಾರ್ಯಾಚರಣೆಯು ಗಗನಯಾತ್ರಿಗಳನ್ನು ಅತ್ಯಂತ ಕಡಿಮೆ ಭೂಮಿಯ ಕಕ್ಷೆಗೆ (LEO) ಸುರಕ್ಷಿತವಾಗಿ ಕೊಂಡೊಯ್ಯುವುದನ್ನು ಒಳಗೊಂಡಿರುತ್ತದೆ. ನಂತರ ಅವರನ್ನು ಯಶಸ್ವಿಯಾಗಿ ಮರಳಿ ತರಲಾಗುವುದು. ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಿದ ಭಾರತೀಯ ವಾಹನಗಳ ಮೂಲಕ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಮಾನವಸಹಿತ ಮಿಷನ್ ಕಳುಹಿಸುವ ಮೊದಲು, ಅದನ್ನು ನಾಲ್ಕು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ಅಕ್ಟೋಬರ್ 21ರಂದು ಮೊದಲ ಹಂತದ ಪರೀಕ್ಷೆ ಆರಂಭವಾಗಲಿದೆ.

ಮೊದಲ ಹಂತದ ಪ್ರಯೋಗ ನಡೆಯಲಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಈ ಕಾರ್ಯಾಚರಣೆ ಅಡಿ ಸಿಬ್ಬಂದಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ನಂತರ ಅದನ್ನು ಮತ್ತೆ ಭೂಮಿಗೆ ತರಲಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್​ ಆಗಲಿದ್ದು, ನೌಕಾಪಡೆಯ ನೆರವಿನಿಂದ ಅದನ್ನು ವಾಪಸ್ ಪಡೆಯಲಾಗುವುದು. ಈ ಮಿಷನ್ ಯಶಸ್ವಿಯಾದರೆ, ಭಾರತವು ತನ್ನ ವಾಹನದಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸಬಹುದಾಗಿದೆ.

 

 

 

 

 

 

 

 

Leave a Reply

Your email address will not be published. Required fields are marked *