ಕಾರ್ಕಳ : ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಕುಂಟಾಲ್‌ಕಟ್ಟೆ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ದೈವದ ಕೋಲ ಹಾಗೂ ಅನ್ನಸಂತರ್ಪಣೆಯು ಮಾ.11 ರಂದು ಜರಗಲಿದೆ.
ನಾಳೆ ಬೆಳಿಗ್ಗೆ 11 ರಿಂದ ನವಕಪ್ರಧಾನ ಹೋಮ ಹಾಗೂ ರಾತ್ರಿ 7 ರಿಂದ ಕಲಶಾಭಿಷೇಕ ನಡೆಯಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಾನುಗ್ರಹಕ್ಕೆ ಪಾತ್ರಾಗಬೇಕಾಗಿ ಹಿಂದೂ ಜಾಗರಣ ವೇದಿಕೆಯ ಪ್ರಕಟಣೆ ತಿಳಿಸಿದೆ.