ಕಾರ್ಕಳ: ವಿಶ್ವಾದ್ಯಂತ ಕಾರ್ಪೊರೇಟ್ ವಲಯ ಆಮೂಲಾಗ್ರಮವಾಗಿ ಬದಲಾಗಿದೆ. ಈ ಹಿಂದಿನ ಉದ್ಯಮಾಡಳಿತ ಚಿಂತನೆ, ಸಿದ್ಧಾಂತ, ತತ್ವಗಳು ಸಮಗ್ರವಾಗಿ ಮಾರ್ಪಾಟು ಹೊಂದಿದೆ. ಇದ್ದಕ್ಕನುಗುಣವಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಕೃತಕ ಬುದ್ದಿಮತ್ತೆ ರೋಬಾಟ್, ಚಾಟ್ ಜಿಪಿಟಿ, ಉದ್ಧಿಮೆಗಳ ಬಳಕೆ ಮತ್ತು ಭಾಷೆಯಾಗಿದೆ. ಮುಂದಿನ ಜನಾಂಗ ಈ ಬದಲಾವಣೆಗಳಿಗೆ ಯೋಗ್ಯವಾಗಿ ಸಂಧಿಸಿ ಮುಂದೆ ಸಾಗುವವರಾಗಬೇಕು. ಉದ್ದಿಮೆಗಳು ತಮ್ಮ ಕಾರ್ಯ ಕೌಶಲದೊಂದಿಗೆ ವಲಯಗಳನ್ನು ಅತ್ಯಂತ ದಕ್ಷರೀತಿಯಲ್ಲಿ ಸಾಗುವಂತೆ ಮಾಡಲು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅತ್ಯಂತ ಕಳಕಳಿ ಮತ್ತು ಜವಾಬ್ದಾರಿಯುಕ್ತ ಕೆಲಸ ಎಂದು ಪ್ರಜ್ ಜೆನ್ ಎಕ್ಸ್ ಲಿಮಿಟೆಡ್ ನ ಮುಖ್ಯಸ್ಥ ಹಾಗು ಉಪಾಧ್ಯಕ್ಷ (ಒಪೆರಷನ್ಸ್)ರಾದ ಸಂದೀಪ್ ಕಿನ್ ಕರ್ ಅಭಿಪ್ರಾಯಪಟ್ಟರು.

ಅವರು ನಿಟ್ಟೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ಉದ್ಯಮಾಡಳಿತ ಪುನರ್ ಚಿಂತನೆ ಹಾಗು ಬದಲಾಗುತ್ತಿರುವ ಸಂದಿಗ್ದ ವ್ಯವಹಾರ ಪರಿಸ್ಥಿತಿಗಳ ಕುರಿತು ಆಯೋಜಿಸಿದ “ನಿಟ್ಟೆ ಉದ್ದಿಮೆ ಕಾರ್ಯಾಗಾರ-2023” ನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.
ಇನೋರ್ವ ಮುಖ್ಯ ಅತಿಥಿಗಳಾದ ಪ್ರಾಕ್ತನ ಉಪಾಧ್ಯಕ್ಷರು ಹಾಗೂ ಮುಖ್ಯಸ್ಥರಾದ (ಸಾಸ್ಕೆನ್ ಟೆಕ್ನಾಲಾಜೀನ್ಸ) ಪ್ರೈ ಲಿಮಿಟೆಡ್ ನ ಸ್ವಾಮಿನಾಥನ್ ಕೃಷ್ಣನ್ ಮಾತನಾಡಿ, ಮಾನವೀಯ ಮೌಲ್ಯಗಳು, ನಂಬಿಕೆ, ದೃಢಚಿತ್ತ, ಪ್ರಾಮಾಣಿಕತ್ವ, ಸಮಯವಾಲನೆಯನ್ನು ಸಂಪೂರ್ಣವಾಗಿ ನೆಚ್ಚಿ ವೃತ್ತಿಪರತೆಯನ್ನು ಪ್ರತಿಹಂತದಲ್ಲೂ ಉದ್ಯೋಗಿಗಳು ಕರಗತ ಮಾಡಿಕೊಳಬೇಕು ಸಾಕಷ್ಟು ಅವಕಾಶಗಳು ಮತ್ತು ಅವಕಾಶಗಳು ಉದ್ಧಿಮೆ ವಲಯದಲ್ಲಿದೆ ಎಂದರು.
ನಿಟ್ಟೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ಸಂಸ್ಥೆ ಆಯೋಜಿಸಿದ ಸಮಯೋಚಿತ ಕಾರ್ಯಾಗಾರವನ್ನು ಮುಕ್ತಕಂಠದಿAದ ಶ್ಲಾಘಿಸಿದರು.

ನಿಟ್ಟೆ (ಪರಿಗಣಿತ ವಿವಿ)ಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಡಾ. ಗೋಪಾಲ ಮುಗೇರಾಯ ಅಧ್ಯಕ್ಷತೆ ವಹಿಸಿದ್ದು ಉದ್ಯಮಾಡಳಿತ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಬದಲಾಗುತ್ತಿರುವ ಕಾರ್ಪೊರೇಟು ವಲಯಗಳ ಆಗುಹೋಗುಗಳಿಗೆ ತಮ್ಮನ್ನು ತಾವು ಕ್ಷಣ, ಕ್ಷಣದಲ್ಲಿ ತೆರೆದು ಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರು ಕಾರ್ಯಾಗಾರದ ಆಶಯ, ಮಹತ್ವ ಮತ್ತು ದಿರ್ಘವಧಿ ಮೌಲ್ಯಗಳ ಬಗ್ಗೆ ಮಾತನಾಡಿದರು.
ಕಾರ್ಯಾಗಾರ ಸಂಯೋಜಕರು ಹಾಗು ಸಂಸ್ಥೆಯ ಪ್ಲೇಸ್ಮೆಂಟ್ ಮತ್ತು ಅಡ್ಮಿಶನ್ ಮುಖ್ಯಸ್ಥರಾದ ಗುರುಪ್ರಶಾಂತ್ ಭಟ್ ಪರಿಚಯಿಸಿ, ಸ್ವಾಗತಿಸಿದರು. ಎಂಬಿಎ ವಿದ್ಯಾರ್ಥಿನಿ ನಿಧಿ ಪ್ರಾರ್ಥಿಸಿದರು. ಪ್ರೊಫೆಸರ್ ಕಾರ್ತಿಕ್ ಕುದ್ರೋಳಿ ವಂದನಾರ್ಪಣೆಗೈದರು. ಡಾ. ಸುಧೀರ್ ರಾಜ್ ಕೆ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಾಗಾರ ಗೋಷ್ಠಿಗಳು:
ಈ ಕಾರ್ಯಾಗಾರದಲ್ಲಿ ಬದಲಾಗುತ್ತಿರುವ ಉದ್ಯಮಾಡಳಿತ ಚಿಂತನೆಗೆ ಸಂಬAಧಿಸಿ ನಾಲ್ಕು ಪ್ರಮುಖ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಪ್ರಮುಖ ಕಂಪನಿಗಳ ಮುಖ್ಯಸ್ಥರು, ಆಡಳಿತ ನಿರ್ದೇಶಕರು ಸಿಇಒಗಳು ಮಾನವ ಸಂಪದ ಅಧಿಕಾರಿಗಳು ಸ್ಟಾಪ್ ಗಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದವು, ಐಟಿಸಿ(ಲಿ) ಎಬಿಡಿ, ಹನಿವೆಲ್ ವರೋಸ್ಪಾಸ್, ಆಟೋಮೋಟಿವ್ ಓಡಿಯೋ ಸಾಫ್ಟ್ ವೇರ್ ಹರ್ಮನ್ ಇಂಟರ್ನ್ಯಾಷನಲ್, ವಿಪ್ ಪ್ಲ್ಯ್ ಇಂಡಿಯಾ, ಜಿಟಿ, ಹೆಚ್ ಅಂಡ್ ಕೋ(ಲಿ), ಕ್ಯಾಂಟಿಲಿವೆರ್ ಲ್ಯಾಬ್ಸ್, ಶುಶ್ರುತ್ ಆಯುರ್ವೇದಿಕ್ ಇಂಡಸ್ಟ್ರೀಸ್, ವೆಂಟನಾ ವೆಂಚರ್ಸ್, ಎಕ್ಸಿಟೋ ಮೀಡಿಯಾ ಕಾನ್ಸೆಪ್ಟ್ ಪ್ರೈ(ಲಿ), ಇನ್ ಫಿನಿಯೋನ್, ವಿಥಮ್ ಇಂಡಿಯಾ ಎಲ್ ಎಲ್ ಪಿ, ಟಯೋಟಾ ಇವರಿ, ರೋಬೋಸೋಫ್ಟ್ ಟೆಕ್ನಾಲಜೀಸ್, ಒನೆಸಿಲ್ಕ್, ಡಬ್ಲ್ಯೂಜಿ ಹೋಲ್ಡಿಂಗ್ಸ್, ಎಐಸಿ ನಿಟ್ಟೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ಎಂಬಿಎ ವಿದ್ಯಾರ್ಥಿಗಳು ಹಾಗು ಪ್ರಾಧ್ಯಾಪಕರ ಜೊತೆ ಸಂವಹನ ನಡೆಸಿದರು.
ಸಮಾರೋಪ:
ಐಟಿಸಿ (ಲಿ) (ಎಂಬಿಡಿ)ಯ ಉಪಾಧ್ಯಕ್ಷ (ಎಚ್ ಆರ್) ಶ್ರೀ ಪಿ ವೀರಾಸ್ವಾಮಿ ಸಮಾರೋಪ ಭಾಷಣಗೈದರು.

