ಕಾರ್ಕಳ: ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ)ನಡೆಸಿದ ಪ್ರೌಢಶಾಲಾ ವಿಭಾಗದ ಜ್ಞಾನ ವಾರಿಧಿ ನೈತಿಕ ಮೌಲ್ಯಾಧಾರಿತ ಅಧ್ಯಯನ ಕುರಿತ ತಾಲೂಕು ಮಟ್ಟದಲ್ಲಿ ನಡೆದ ನಾಲ್ಕು ವಿಭಾಗದ ಸ್ಪರ್ಧೆಗಳ ಪೈಕಿ ಹೆಬ್ರಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮೂರು ಸ್ಪರ್ಧೆಗಳಲ್ಲಿ ( ಪ್ರಬಂಧ, ಪ್ರಾಥನಾ ಶ್ಲೋಕ ಕಂಠಪಾಠ ಹಾಗೂ ಚಿತ್ರಕಲೆ ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಬಂಧ ವಿಭಾಗದಲ್ಲಿ ಪನ್ನಿಧಿ ಶೆಟ್ಟಿ
ಶ್ಲೋಕ ಕಂಠಪಾಠ ವಿಭಾಗದಲ್ಲಿ ಸಂಜನಾ ಭಟ್
ಚಿತ್ರಕಲೆ ವಿಭಾಗದಲ್ಲಿ ಸೃಜನ್ ಆಚಾರ್ಯ ಪ್ರಥಮ ಸ್ಥಾನ ಪಡೆಯುವ ಮೂಲಕ ಧರ್ಮಸ್ಥಳದಲ್ಲಿ ನಡೆಯುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸುವ ನಾಲ್ಕು ವಿಭಾಗದ ಸ್ಪರ್ಧೆಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ಶಾಲಾ ವಿದ್ಯಾರ್ಥಿಗಳು ಮೂರು ವಿಭಾಗದಲ್ಲಿ ಜಯಗಳಿಸಿರುವುದು ವಿಶೇಷ ಸಾಧನೆಯಾಗಿದೆ