ಹಾಸನ: ನ್ಯಾಯಾಲಯಕ್ಕೆ ಗೈರು ಹಾಗೂ ಕೋರ್ಟ್ ಸಮನ್ಸ್ ಪಡೆಯದ ಆರೋಪದಲ್ಲಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಪ್ರಕರಣ ಎನ್ನುವಂತೆ ಹಾಸನ ತಹಶೀಲ್ದಾರ್ ಬಂಧನಕ್ಕೆ ಹಾಸನ ಜಿಲ್ಲಾ ಕೋರ್ಟ್ ವಾರೆಂಟ್ ಜಾರಿಗೊಳಿಸಿದೆ.
ವಿವಿಧ ಪ್ರಕರಣ ಸೇರಿದಂತೆ ಕೋರ್ಟ್ ನಲ್ಲಿ ದಾಖಲಾಗಿದ್ದ ಪ್ರಕರಣಗಳ ಬಗ್ಗೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಹಾಸನ ತಹಶೀಲ್ದಾರ್ ನಿರಂತರವಾಗಿ ಗೈರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾಗುವಂತೆ ಸಾಕಷ್ಟು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ಸಮನ್ಸ್ ಸ್ವೀಕರಿಸಿದ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಾಸನ ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶರು, ಹಾಸನ ತಹಶೀಲ್ದಾರ್ ಅವರನ್ನು ಬಂಧಿಸುವAತೆ ವಾರೆಂಟ್ ಜಾರಿಗೊಳಿಸಿದ್ದಾರೆ. ಶಿರಸ್ತೇದಾರ್ ಜತೆಗೆ ತಹಶೀಲ್ದಾರ್ ಅವರನ್ನು ಬಂಧಿಸುವAತೆ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹಾಸನ ತಹಶೀಲ್ದಾರ್ ಬಳಿಯಲ್ಲಿ ವಕೀಲರು, ಪೊಲೀಸರು ಜಮಾಯಿಸಿದ್ದಾರೆ. ಕೋರ್ಟ್ ಆದೇಶ ಪ್ರತಿ ಹಿಡಿದು ಹಾಸನ ತಹಶೀಲ್ದಾರ್ ಬಂಧನಕ್ಕೆ ಕ್ರಮವಹಿಸಿದ್ದಾರೆ.