ಕಾರ್ಕಳ: ದಿ.ಮೀರಾ ಕಾಮತ್ ಸ್ಮರಣಾರ್ಥ ಕಾರ್ಕಳ ಹೊಸಸಂಜೆ ಬಳಗದ ವತಿಯಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆಯು ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆಯಲ್ಲಿ ನವೆಂಬರ್ 5ರಂದು ಭಾನುವಾರ ನಡೆಯಲಿದೆ.
ಒಟ್ಟು ಮೂರು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು ಒಟ್ಟು 30 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ ಮೂವರಿಗೆ ತಲಾ 4 ಸಾವಿರ, ದ್ವಿತೀಯ ಬಹುಮಾನವಾಗಿ ಮೂವರಿಗೆ ತಲಾ 3 ಸಾವಿರ, ತೃತೀಂiÀi ಬಹುಮಾನವಾಗಿ ಮೂವರಿಗೆ ತಲಾ 1 ಸಾವಿರ ರೂಪಾಯಿ ಹಾಗೂ ಚತುರ್ಥ ಬಹುಮಾನವಾಗಿ ಪ್ರತೀ ವಿಭಾಗಕ್ಕೆ ನಾಲ್ವರಿಗೆ ತಲಾ 500 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಸಂಘಟಕರಾದ ದೇವರಾಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9845939051 ಸಂಪರ್ಕಿಸಬಹುದಾಗಿದೆ