ಬೆಂಗಳೂರು: ಪತಿಯ ವಿಚ್ಛೇದನ ನೋಟಿಸ್ ಬಳಿಕವೂ 498ಎ ಕೇಸ್ ದಾಖಲಿಸಬಹುದು ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಲಾಗಿದೆ.
ಪತಿ, ಕುಟುಂಬದವರ ಕಿರುಕುಳದಿಂದ ರಕ್ಷಿಸಲು 498ಎ ಕಾನೂನು ತರಲಾಗಿದೆ. ಅದೇ ರೀತಿಯಾಗಿ ಪತ್ನಿಯನ್ನು ರಕ್ಷಿಸಲು 498ಎ ಕಾನೂನು ತರಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. 498ಎ ಕೌಟುಂಬಿಕ ಕಿರುಕುಳದಿಂದ ಮಹಿಳೆಗೆ ರಕ್ಷಣೆ ಒದಗಿಸುತ್ತದೆ. ಆದರೆ ಪತಿ ನೀಡುವ ವಿಚ್ಛೇದನದ ನೋಟಿಸ್ ರಕ್ಷಣೆ ಒದಗಿಸುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠದಿಂದ ಆದೇಶಿಸಲಾಗಿದೆ.
ಪತಿಯಿಂದ ವಿವಾಹ ವಿಚ್ಛೇದನ ನೋಟಿಸ್ ಬಂದ ನಂತರ ಪತ್ನಿ, ಪತಿ ಹಾಗೂ ಅವರ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ದೌರ್ಜನ್ಯ ಕಾಯ್ದೆಯಡಿ ದೂರು ನೀಡಿದರೆ ಅದನ್ನು ಮಾನ್ಯ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.
