ಕಾರ್ಕಳ: ಪರಶುರಾಮನ ಪ್ರತಿಮೆಯ ವಿಚಾರವಾಗಿ ಕಾರ್ಯಕರ್ತರ ಸಭೆಯಲ್ಲಿ ಶಾಸಕರು ನೀಡಿದ ಹೇಳಿಕೆ ಸಮರ್ಥನೆಯೇ ಹೊರತು ಅದೇ ಸತ್ಯವಲ್ಲ, ಭಾಷೆಯ ಎಲ್ಲೆ ಮೀರಿ ಆಡಿದ ಅಸಭ್ಯ ಮತ್ತು ಅವಹೇಳನ ಮಾತುಗಳಿಂದ ಏನೂ ಸಾಧಿಸಿದಂತೆ ಆಗುದಿಲ್ಲ. ಧರ್ಮದ ದುರ್ಬಳಕೆಯೇ ಭಿಕ್ಷೆ ಬೇಡುವ ಪರಿಸ್ಥಿತಿಗೆ ತರುತ್ತದೆ ಎನ್ನುವುದು ನಿಮ್ಮ ಮಾತಿನಿಂದ ಸಾಬೀತಾಗಿದೆ. ಮಾಡಿದ ಆರೋಪಗಳು ಸುಳ್ಳೆಂದು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಿದರೆ ನಾನು ಕ್ಷಮೆ ಕೇಳಿ ರಾಜಕೀಯ ನಿವೃತ್ತಿಯಾಗುತ್ತೇನೆ ಅಂದೇ ನಮ್ಮ ನಡುವಿನ ರಾಜಕೀಯ ಸಂಘರ್ಷ ಕೊನೆಯಾಗಲಿ ಪ್ರಮಾಣ ಮಾಡುವ ಸ್ಥಳ, ಸಮಯ, ದಿನಾಂಕವನ್ನು ನೀವೇ ನಿರ್ಧರಿಸಿ ಎಂದು ಶಾಸಕ ಸುನಿಲ್ ಕುಮಾರ್ ರಿಗೆ ಪುರಸಭಾ ಸದಸ್ಯ ಕಾಂಗ್ರೆಸ್ ವಕ್ತಾರ ಶುಭದರಾವ್ ಸವಾಲು ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪರಶುರಾಮನ ಪ್ರತಿಮೆ ಬಗ್ಗೆ ಅವರು ನೀಡಿದ ಸಮರ್ಥನೆ ಸುಳ್ಳಿನಿಂದ ಕೂಡಿದೆ. ತನ್ನ ಮೇಲೆ ಬಂದ ಆರೋಪಗಳನ್ನು ಕಾರ್ಯಕರ್ತರ ಸಭೆ ಕರೆದು ಅವರ ಮುಂದೆ ಹೇಳುವ ದುಸ್ಥಿತಿ ಅವರಿಗೆ ಬಂದಿರುವುದು ನಮ್ಮ ದುರಂತ. ಅವರ ಮೇಲೆ ಮಾಡಿದ ಅರೋಪಗಳಲ್ಲಿ ಒಂದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿರುವ ಅವರು ದೇಗುಲದಲ್ಲಿ ಪ್ರಮಾಣಕ್ಕೆ ಬರುವ ಮೂಲಕ ಆರೋಪಗಳೆಲ್ಲವೂ ಸುಳ್ಳೆಂದು ಸಾಬೀತುಪಡಿಸಲು ಒಳ್ಳೆಯ ಅವಕಾಶವಿದೆ ಸವಾಲನ್ನು ಸ್ವೀಕರಿಸಲಿ ಇಲ್ಲವಾದಲ್ಲಿ ತಪ್ಪನ್ನು ಒಪ್ಪಿಕೊಂಡಂತೆ ಎಂದು ಸವಾಲೆಸೆದಿದ್ದಾರೆ.
ಥೀಮ್ ಪಾರ್ಕ್ ಸಂಬಂಧಿಸಿದಂತೆ 5 ಪ್ರಶ್ನೆಗಳು
1) ಈ ವಿಡಿಯೋ ಪ್ರತಿಮೆ ಸ್ಥಾಪನೆಯ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೇ ಅಥವಾ ಪ್ರತಿಮೆ ತೆರವುಗೊಳಿಸುವಾಗ ಚಿತ್ತೀಕರಣ ಮಾಡಿದ್ದೆ?
2) ಈ ವಿಡಿಯೋದಲ್ಲಿ ದಾಖಲಾಗಿರುವಂತೆ ಕೈನ್ ಮೂಲಕ ಎತ್ತಿದ ಪರಶುರಾಮನ ಎದೆಯ ಮೇಲಿನ ಭಾಗ ಕಂಚಿನದ್ದೇ?
3) ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪರಶುರಾಮನ ಪ್ರತಿಮೆ ಸಂಪೂರ್ಣ ಕಂಚಿನದ್ದೇ?
4) ಪ್ರತಿಮೆಯ ಮೇಲ್ಬಾಗ ತೆರವು ವಿಚಾರವಾಗಿ ಜಿಲ್ಲಾಡಳಿತ, ಪೋಲೀಸ್, ಮತ್ತು ನಿರ್ಮಿತಿ ಕೇಂದ್ರ ಮೇಲೆ ತಾವು ಒತ್ತಡ ಹೇರಲಿಲ್ಲವೇ?
5) ಕಾಂಗ್ರೆಸ್ ಅನುದಾನ ತಡೆ ಹಿಡಿದಿದೆ ಎಂದ ಹೇಳಿದ ತಮ್ಮ ಆರೋಪ ಸರಿಯೇ?
ಈ ಎಲ್ಲ ಸವಾಲುಗಳಿಗೆ ತಾವು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಬೇಕಾಗಿ ಶುಭದ ರಾವ್ ಸವಾಲು ಹಾಕಿದ್ದಾರೆ.




