ಕಾರ್ಕಳ : ಪರಶುರಾಮ ಥೀಂ-ಪಾರ್ಕ್ ಲೋಕಾರ್ಪಣೆಯ ಎರಡನೇ ದಿನವಾದ ಶನಿವಾರ ಭಜನಾ ತಂಡ ಉದ್ಘಾಟನೆಯ ಪ್ರಯುಕ್ತ ಭಜನಾ ತಂಡಗಳ ಮೆರವಣಿಗೆ ಬೈಲೂರು ಪಳ್ಳಿ ಕ್ರಾಸ್‌ನಿಂದ ಪರಶುರಾಮ ಥೀ-ಪಾರ್ಕ್ಗೆ ಸಾಗಿ ಬಂತು. ಎಲ್ಲೆಡೆ ಭಜನೆ, ಕೀರ್ತನೆಗಳು ಮೊಳಗಿದ್ದು, ಧಾರ್ಮಿಕ ಸಂಪ್ರದಾಯಕ್ಕೆ ವಿಶೇಷ ಮೆರುಗು ನೀಡಿತ್ತು.
ಉದ್ಯಮಿ ಎನ್.ಟಿ. ಪೂಜಾರಿ ಭಜನಾ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಚಿವ ವಿ. ಸುನಿಲ್ ಕುಮಾರ್, ರಾಮಕೃಷ್ಣಾಶ್ರಮದ ವಿನಾಯಕಾನಂದಜೀ ಸ್ವಾಮೀಜಿ, ಉದ್ಯಮಿ ಸಾಧು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಭಜನಾ ಮೆರವಣಿಗೆಯಲ್ಲಿ ಒಟ್ಟು 257 ತಂಡಗಳು ಭಾಗವಹಿಸಿದ್ದು, ಸಹಸ್ರಾರು ಸಂಖ್ಯೆಯ ಭಜನಾ ತಂಡದ ಸದಸ್ಯರುಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಭಜನಾ ಮೆರವಣಿಗೆ ಸಾಗುತ್ತಿದ್ದ ರಸ್ತೆಯುದ್ದಕ್ಕೂ ರಂಗೋಲಿ ಹಾಕಿ ಶೃಂಗರಿಸಲಾಗಿತ್ತು. ಎಸ್‌ಎಲ್‌ಆರ್‌ಎಂ ಘಟಕಗಳ ಸಿಬ್ಬಂದಿಗಳು ಮೆರವಣಿಗೆ ಸಾಗುತ್ತಿದ್ದಂತೆ ಸ್ವಚ್ಛತೆಗೂ ಆದ್ಯತೆ ನೀಡಿದ್ದರು.
ಕಾರ್ಕಳ ವಿಧಾನಸಭಾ ಕ್ಷೇತ್ರ ಸೇರಿದಂತೆ, ಮೂಡಬಿದಿರೆ ಮತ್ತು ಹಿರಿಯಡ್ಕದ ಭಜನಾ ತಂಡಗಳು ಭಾಗವಹಿಸಿದ್ದರು. ಪರಶುರಾಮನ ಟ್ಯಾಬ್ಲೋ, ವಾದ್ಯ-ಬ್ಯಾಂಡ್‌ಗಳ ತಂಡ, ಕುಣಿತ ಭಜನೆಯ ತಂಡ ಹಾಗೂ ಕುಳಿತು ಭಜನೆ ಮಾಡುವ ತಂಡಗಳು ಮೆರವಣಿಗೆಯಲ್ಲಿ ಕಂಡು ಬಂದಿದ್ದು, ಮಕ್ಕಳಿಂದ ಹಿಡಿದು ವಯೋವೃದ್ದರು ಈ ಭಜನಾ ಮೆರವಣಿಗೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.
ಹಿಂದೂ ಸಂಪ್ರದಾಯದAತೆ ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ತೊಡಿಸಿಕೊಂಡು ಭಜಕರ ತಂಡ ರಸ್ತೆಯುದ್ದಕ್ಕೂ ಸಾಗಿ ಬಂದಿತ್ತು. ಪೊಲೀಸ್ ಇಲಾಖೆ ಹಾಗೂ ಸ್ವಯಂ ಸೇವಕರ ತಂಡವು ರಸ್ತೆ ಸಂಚಾರಕ್ಕಾಗಿ ಮುನ್ನೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಿ ಮೆರವಣಿಗೆಯ ಯಶಸ್ಸಿಗೆ ಸಹಕರಿಸಿದರು.