ಕಾರ್ಕಳ: ಬೈಲೂರು ಸಮೀಪದ ಉಮಿಕ್ಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕಿನಲ್ಲಿ ಫೋಟೋ ತೆಗೆಯಲು ತೆರಳಿದ್ದ ಯುವಕನನ್ನು ತಡೆದ ಯುವಕರ ತಂಡ ಆತನ ಮೊಬೈಲ್ ಕಸಿದು ಪೋಟೋ ತೆಗೆಯದಂತೆ ಬೆದರಿಕೆಯೊಡ್ಡಿದ್ದಾರೆ ಎಂದು ಅಲ್ಬಝ್ ಎಂಬವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಅಲ್ಬಝ್ ಗುರುವಾರ ಸಂಜೆ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ತೆರಳಿದ ಸಮಯದಲ್ಲಿ ಸ್ಥಳದಲ್ಲಿದ್ದ ವಿಖ್ಯಾತ್,ಸುಹಾಸ್ ಶೆಟ್ಟಿ, ರಾಕೇಶ್, ರಂಜಿತ್ ಹಾಗೂ ಮುಸ್ತಾಫ ಮತ್ತಿತರರು ಸೇರಿಕೊಂಡು ಅಲ್ಬಝ್ ನನ್ನು ಎಳೆದುಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಮೊಬೈಲನ್ನು ಕಸಿಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




