Share this news

ನವದೆಹಲಿ : ನಮ್ಮ ಹಣಕಾಸಿನ ವ್ಯವಹಾರಗಳ ವಿವರಗಳನ್ನ ತಿಳಿದುಕೊಳ್ಳಲು ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿರುತ್ತದೆ. ಪ್ಯಾನ್ ಬ್ಯಾಂಕ್ ಖಾತೆಯನ್ನ ತೆರೆಯುವುದರಿಂದ, ಹಣಕಾಸಿನ ವಹಿವಾಟುಗಳು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ನಮತೆ ಪ್ಯಾನ್ ಕಾರ್ಡ್ ಕೂಡ ಪ್ರಮುಖ ದಾಖಲೆಯಾಗಿದ್ದು, ಇದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಕೇಂದ್ರ ಮತ್ತು ಆದಾಯ ತೆರಿಗೆ ಇಲಾಖೆ ಪದೇ ಪದೇ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕು ಎಂದು ಹೇಳುತ್ತಲೇ ಇದೆ. ಆದರೆ ಇನ್ನೂ ಕೆಲವರು ಲಿಂಕ್ ಮಾಡಿಲ್ಲ್. ಅಂತಹವರಿಗೆ ಇದು ಕೊನೆಯ ಎಚ್ಚರಿಕೆಯಾಗಿದ್ದು, ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಶಾಶ್ವತವಾಗಿ ರದ್ದುಗೊಳಿಸಬಹುದು.

ಈ ಕುರಿತು ಕೇಂದ್ರ ಸರ್ಕಾರ ತುರ್ತು ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಯ ಪ್ರಕಾರ ಕೋಟಿಗಟ್ಟಲೆ ಪ್ಯಾನ್ ಕಾರ್ಡ್ಗಳು ನಿಷ್ಪ್ರಯೋಜಕವಾಗುತ್ತವೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ನಿತಿನ್ ಗುಪ್ತಾ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಪ್ರಕಾರ, ದೇಶಾದ್ಯಂತ 61 ಕೋಟಿ ಪ್ಯಾನ್ ಕಾರ್ಡ್ ಗಳ ಪೈಕಿ ಕೇವಲ 48 ಕೋಟಿ ಜನ ಮಾತ್ರ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿದ್ದಾರೆ. ಇನ್ನೂ ಕೂಡ 13 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಮಾರ್ಚ್ 31, 2023 ರೊಳಗೆ, ಪ್ಯಾನ್ ಕಾರ್ಡ್- ಆಧಾರ್ ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ದಂಡ ಶುಲ್ಕವನ್ನು ಈಗಾಗಲೇ ವಿಧಿಸಿರುವ ಗಡುವಿಗೆ ಲಿಂಕ್ ಮಾಡಬೇಕು. ಇಲ್ಲದಿದ್ದರೆ ನೀವು ಬ್ಯಾಂಕ್ ವಹಿವಾಟು ಮತ್ತು ಇತರ ವ್ಯಾಪಾರ ಚಟುವಟಿಕೆಗಳನ್ನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

ಇದುವರೆಗೆ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದೇ ಇದ್ದರೆ ತಕ್ಷಣ ಮಾಡಿಸಿ. ಮಾರ್ಚ್ 31 ರೊಳಗೆ ಈ ಕಾರ್ಯವನ್ನ ಪೂರ್ಣಗೊಳಿಸದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗುವ ಸಾಧ್ಯತೆಯಿದೆ. ಇನ್ನು ಮಾರ್ಚ್ 31ರ ನಂತರ ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡಿದವರಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತೆ.

Leave a Reply

Your email address will not be published. Required fields are marked *