ನವದೆಹಲಿ :ದೆಹಲಿಯ ವಿಶೇಷ ಪೊಲೀಸ್ ತಂಡವು ಶಂಕಿತ ಐಸಿಸ್ ಉಗ್ರ ಶಹನ್‌ವಾಜ್ ಅಲಿಯಾಸ್ ಶಫಿಯನ್ನು ದೆಹಲಿಯಲ್ಲಿ ಬಂಧಿಸಿದೆ. ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನ್‌ವಾಜ್ ಮೂಲತಃ ದೆಹಲಿಯವರು. ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದರು. ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.
ಐಎಸ್‌ಐಎಸ್ ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ಎನ್‌ಐಎ 7 ಜನರನ್ನು ಬಂಧಿಸಿತ್ತು. ಈ ವೇಳೆ ಮೂವರು ಉಗ್ರರು ತಪ್ಪಿಸಿಕೊಂಡು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದರು. ಈ ಮೂವರು ಭಯೋತ್ಪಾದಕರಲ್ಲಿ ಶಹನವಾಜ್ ಅಲಿಯಾಸ್ ಶಫಿ ಒಬ್ಬನಾಗಿದ್ದ. ಮೂವರು ಐಸಿಸ್ ಉಗ್ರರು ರಾಜಧಾನಿಯಲ್ಲಿ ಅಡಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಪೊಲೀಸರು ಅಲರ್ಟ್ ಮೋಡ್‌ನಲ್ಲಿ ಬಂದು ಮೂವರಿಗಾಗಿ ಹುಡುಕಾಟ ಆರಂಭಿಸಿದ್ದರು. ಇದೀಗ ಕಾರ್ಯಚರಣೆ ನಡೆಸಿ ಶಫಿಯನ್ನು ಬಂಧಿಸಿದ್ದಾರೆ.
ಪುಣೆ ಐಸಿಸ್ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ಭಯೋತ್ಪಾದಕರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ ಮತ್ತು ಅಬ್ದುಲ್ಲಾ ಫಯಾಜ್ ಶೇಖ್ ಇನ್ನೂ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.