ಪೆರ್ಡೂರು: ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಉಡುಪಿ ಆಗುಂಬೆ ರಾಷ್ಟಿçÃಯ ಹೆದ್ದಾರಿಗೆ ಹೊಂದಿಕೊAಡಿರುವ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನವು ಫೆ 11ರಂದು ಭಾನುವಾರ ಲೋಕಾರ್ಪಣೆಯಾಗಲಿದೆ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷರಾದ ಶಾಂತರಾಮ ಸೂಡ ಹೇಳಿದರು.

ಅವರು ಪೆರ್ಡೂರಿನ ನೂತನ ಬಂಟರ ಸಮುದಾಯದ ಭವನದಲ್ಲಿ ಫೆ8ರಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಕದಳೀಪ್ರಿಯ ಪೆರ್ಡೂರು ಅನಂತಪದ್ಮನಾಭನ ಕ್ಷೇತ್ರದಲ್ಲಿನ ಸುಂದರ ಪರಿಸರದಲ್ಲಿ 3.50 ಎಕರೆ ಪ್ರದೇಶದಲ್ಲಿ ಜನರ ಅಗತ್ಯಕ್ಕೆ ಅನುಗುಣವಾಗಿ ಸಕಲ ಸೌಕರ್ಯಗಳನ್ನೊಳಗೊಂಡಿರುವ ಹವಾನಿಯಂತ್ರಿತ ಸಮುದಾಯ ಭವನ ಉದ್ಘಾಟನೆಯಾಗಲಿದೆ ಎಂದರು.
ಪೆರ್ಡೂರು ಮಂಡಲದ ಬಂಟರ ಸಂಘದ ಅಧ್ಯಕ್ಷ ಶಾಂತರಾಮ ಸೂಡ ನೂತನ ಸಭಾಭನವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬಯಿ ವಿಲೇಪಾರ್ಲೆ ರಾಮಕೃಷ್ಣ ಗ್ರೂಫ್ ಆಫ್ ಹೊಟೇಲ್ಸ್ ನ ಮಾಲಕ ಸುಬ್ಬಯ್ಯ. ವಿ ಶೆಟ್ಟಿ, ಮಣಿಪಾಲ ಮಾಹೆ ವಿ.ವಿ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಳ್ಳಾಲ್, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬೆಂಗಳೂರು ಎಂ.ಆರ್.ಜಿ ಗ್ರೂಪ್ ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಮಾಜಿ ಅಧ್ಯಕ್ಷ ಶೇಡಿಕೋಡ್ಲು ವಿಠಲ ಶೆಟ್ಟಿ, ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಂಗಳೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಕೈಲ್ಕೆರೆ ಭಾಸ್ಕರ ಶೆಟ್ಟಿ, ಪಳ್ಳಿ ಪೆಜಕೊಡಂಗೆ ಲಿಲಾವತಿ ಎಸ್ ಹೆಗ್ಡೆ, ಉಡುಪಿ ಪ್ರೇಮಲತಾ ಸತಿಶ್ಚಂದ್ರ ಹೆಗ್ಡೆ, ಉಡುಪಿ ನಿವೃತ್ತ ವೈದ್ಯಾಧಿಕಾರಿ ಡಾ. ಎ ಮನೋರಂಜನ್ದಾಸ್ ಹೆಗ್ಡೆ, ಮುಂಬಯಿ ಚಾರ್ಟರ್ಡ್ ಅಕೌಂಟೆAಟ್ ಎನ್. ಬಿ ಶೆಟ್ಟಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅದಾನಿ ಗ್ರೂಪ್ ನ ಸಿಇಓ ಕಿಶೋರ್ ಆಳ್ವ, ಭದ್ರಾವತಿ ಸಂತೋಷ್ ರೈಸ್ ಮಿಲ್ ಮಾಲಕ ಸುಧಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಮಂಗಳೂರು ಉಡುಪಿ ತಾಲೂಕು ಬಂಟರ ಸಂಘದ ಸಂಚಾಲಕ ಶಿವಪ್ರಸಾದ್ ಹೆಗ್ಡೆ, ಬೆಂಗಳೂರು ಉದ್ಯಮಿ ದಿನೇಶ್ ಹೆಗ್ಡೆ, ಉದ್ಯಮಿ ಹಿರಿಯಡ್ಕ, ಕೆ ರಾಜಾರಾಮ ಹೆಗ್ಡೆ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದ್ಯಮಿ ಮುನಿಯಾಲು ಉದಯ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಶಾಂತರಾಮ ಸೂಡ ಮಾಹಿತಿ ನೀಡಿದರು.
ಪೆರ್ಡೂರು, ಬೈರಂಪಳ್ಳಿ, 41ನೇ ಶೀರೂರು ಹಾಗೂ ಬೆಳ್ಳರ್ಪಾಡಿ ಗ್ರಾಮಗಳನ್ನು ಒಳಗೊಂಡ ವ್ಯಾಪ್ತಿಯಲ್ಲಿ ಪೆರ್ಡೂರು ಬಂಟರ ಸಂಘವು ಸುಮಾರು 7 ಕೋ.ರೂ ವೆಚ್ಚದ ಭವ್ಯವಾದ ಸಭಾಭನವ ನಿರ್ಮಿಸುವ ಮೂಲಕ ಉಡುಪಿ ಜಿಲ್ಲೆಯ ಮಾದರಿ ಬಂಟರ ಸಂಘದ ಹೆಗ್ಗಳಿಕೆ ಪಾತ್ರವಾಗಿದೆ. ಪೆರ್ಡೂರು ಸುತ್ತಮುತ್ತಲಿನ ಜನತೆಗೆ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಸಭಾಭವನವು ಊರಿನಲ್ಲೇ ಕಾಣುವ ಸುವರ್ಣಾವಕಾಶ ಒದಗಿ ಬಂದಿದೆ.
ನೂತನ ಸಭಾಭವನವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಸುಮಾರು 900 ಆಸನಗಳ ಸಾಮರ್ಥ್ಯ ಹೊಂದಿದೆ, ಇದಲ್ಲದೇ ವಿಶಾಲವಾದ ವೇದಿಕೆ,ನೃಹತ್ ಗ್ರೀನ್ ರೂಮ್, ಇದಲ್ಲದೇ ಸುಮಾರು 600 ವಾಹನಗಳನ್ನು ನಿಲ್ಲಿಸಬಹುದಾದ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ,3 ಕಾರ್ಯಕ್ರಮದ ಸಂದರ್ಭದಲ್ಲಿ ಉಳಿದುಕೊಳ್ಳಲು ಆಧುನಿಕ ಸೌಕರ್ಯಗಳ ಹವಾನಿಯಂತ್ರಿತ ಅತಿಥಿಗೃಹ, ದಿನದ 24 ಗಂಟೆಯೂ ಲಿಫ್ಟ್ ಹಾಗೂ ನೀರಿನ ವ್ಯವಸ್ಥೆ, ಏಕಕಾಲದಲ್ಲಿ ಸುಮಾರು 600 ಜನರು ಊಟಕ್ಕೆ ಕುಳಿತುಕೊಳ್ಳುವ ಡೈನಿಂಗ್ ಹಾಲ್, ಸಸ್ಯಾಹಾರ ಹಾಗೂ ಮಾಂಸಾಹಾರಕ್ಕೆ ಪ್ರತ್ಯೇಕ ಕಿಚನ್ ಹಾಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಂತರಾಮ ಸೂಡ ಹೇಳಿದರು.
ಪೆರ್ಡೂರು ಬಂಟರ ಸಂಘವು ಸ್ಥಾಪಿಸಿದ್ದ ಬಂಟರ ಸೌಹಾರ್ದ ಸಹಕಾರಿ ಸಂಘವು ಕಳೆದ 4 ವರ್ಷಗಳಲ್ಲಿ 50 ಕೋ.ರೂ ವಹಿವಾಟು ನಡೆಸಿದೆ. ಪ್ರಸ್ತುತ ಸಂಘವು 5 ಕೋ.ರೂ ಚರಾಸ್ತಿ ಹಾಗೂ 9 ಕೋ.ರೂ ಮೊತ್ತದ ಸ್ಥಿರಾಸ್ತಿ ಹೊಂದಿದೆ. ಸಂಘದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ 7 ಲಕ್ಷ ವಿದ್ಯಾರ್ಥಿವೇತನ ವಿತರಣೆ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೆಚ್ಚ ನೀಡುವ ಮೂಲಕ ಸಂಘವು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಉಡುಪಿ ಜಿಲ್ಲೆಗೆ ಮಾದರಿಯಾಗಿರುವ ಸುಮುದಾಯ ಭವನವನ್ನು ನಿರ್ಮಿಸಲು ಕೈಜೋಡಿಸಿದ ಪಳ್ಳಿ ಶ್ರೀನಿವಾಸ ಹೆಗ್ಡೆ ಕುಟುಂಬಕ್ಕೆ ಹಾಗೂ ಬಂಟ ಸಮಾಜದ ದಾನಿಗಳ ಸಹಕಾರಕ್ಕೆ ಪೆರ್ಡೂರು ಬಂಟರ ಸಂಘವು ಅಭಾರಿಯಾಗಿದೆ ಎಂದು ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ಚಂದ್ರ ಶೆಟ್ಟಿ ಬಜ್ಜಾಲು, ರಾಜಕುಮಾರ್ ಶೆಟ್ಟಿ ಡೊಡ್ಮನೆ, ಶಿವರಾಮ ಶೆಟ್ಟಿ ಬೆಳ್ಳರ್ಪಾಡಿ,ಮಹೇಶ್ ಶೆಟ್ಟಿ ಪೈಬೆಟ್ಟು, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಕುತ್ಯಾರುಬೀಡು, ಕೋಶಾಧಿಕಾರಿ ಪ್ರಮೋದ್ ರೈ ಪಳಜೆ ಉಪಸ್ಥಿತರಿದ್ದರು.




ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ





