ಕಾರ್ಕಳ: ಕಾಶ್ಮೀರವಾಗಲಿ ಅಥವಾ ಇಸ್ರೇಲ್ ಆಗಿರಲಿ ಕಾಂಗ್ರೆಸ್ ಮಾತ್ರ ಎಂದಿಗೂ ಉಗ್ರರ ಪರವಾಗಿ ನಿಲ್ಲುತ್ತದೆ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪ್ಯಾಲಸ್ತೀನಿಯರ ಪರ ನಿರ್ಣಯ ಕೈಗೊಂಡ ವಿಚಾರದ ಕುರಿತು ಸುನಿಲ್ ಕುಮಾರ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಪ್ಯಾಲಸ್ತೀನಿಯ ಹಮಾಸ್ ಉಗ್ರರು ಇಸ್ರೇಲ್ ಅಮಾಯಕ ನಾಗರಿಕರ ಮೇಲೆ ನಡೆಸಿದ ಹೇಯಕೃತ್ಯವನ್ನು ಕಾಂಗ್ರೆಸ್ ಸಮರ್ಥಿಸುವುದಾಗಿ ನೇರ ಹೇಳಿಕೆ ನೀಡಬಹುದಿತ್ತು, ಆದರೆ ಪ್ಯಾಲಸ್ತೀನಿಯ ಉಗ್ರರ ಭೂಮಿ,ಆಡಳಿತ ಹಾಗೂ ಸ್ವಾಭಿಮಾನಿ ಬದುಕು ನಡೆಸುವ ಪರವಾಗಿ ನಾವಿದ್ದೇವೆ ಎನ್ನುವ ಮೂಲಕ ಅಮಾಯಕರ ಹತ್ಯೆಯನ್ನು ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲಿಸಿದೆ. ಅಂತರಾಷ್ಟಿçÃಯ ಭಯೋತ್ಪಾದನೆಯ ವಿಚಾರ ಬಂದಾಗಲೂ ತನ್ನ ಮತಬ್ಯಾಂಕಿಗೆ ಧಕ್ಕೆಯಾಗುತ್ತದೆ ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಕಣ್ಣೆದುರೇ ಮಹಿಳೆಯರ ಮೇಲೆ ಅತ್ಯಾಚಾರ,ಹತ್ಯೆ ನಡೆಯುತ್ತಿದ್ದರೂ ಕಾಂಗ್ರೆಸ್ ಮಾತ್ರ ಆರೋಪಿಯ ಧರ್ಮ ಯಾವುದು ಎಂದು ಹುಡುಕುವ ಮಾನಸಿಕತೆಯಲ್ಲಿದೆ ಎಂದು ಸುನಿಲ್ ವಾಗ್ದಾಳಿ ನಡೆಸಿದ್ದಾರೆ