Share this news

ಕಾರ್ಕಳ: ಕಾರ್ಕಳದ ಪೆರ್ವಾಜೆ ಸುವರ್ಣ ಭೂಮಿಯಲ್ಲಿರುವ ಶಿರ್ಡಿ ಸಾಯಿ ಮಂದಿರದ ದಶಮಾನೋತ್ಸವ ಸಂಭ್ರಮವು ಫೆ.14ರಿಂದ 16ರವರೆಗೆ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಅನಂತ ಪದ್ಮನಾಭ ಭಟ್ ಹೇಳಿದ್ದಾರೆ.


ಅವರು ಗುರುವಾರ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಯಿ ಮಂದಿರದಲ್ಲಿ ಸಾಯಿ ವಿಗ್ರಹ ಪ್ರತಿಷ್ಠಾಪಿಸಿ ಹತ್ತು ವರ್ಷಗಳು ಕಳೆದಿವೆ. ಭಕ್ತರ ಸಹಕಾರದಿಂದ ಕಳೆದ ಹತ್ತು ವರ್ಷಗಳಿಂದ ಈ ದೇವಳ ಅಭಿವೃದ್ದಿಯತ್ತ ಸಾಗಿದೆ. ಪ್ರಸಕ್ತ ಸಾಲಿನಲ್ಲಿ ನಡೆಯುವ ದಶಮಾನೋತ್ಸವ ಕಾರ್ಯಕ್ರಮದ ನಿಮಿತ್ತ ಅಡುಗೆಕೋಣೆ, ಭೋಜನ ಶಾಲೆ, ಕೊಳವೆ ಬಾವಿ, ಮಕ್ಕಳ ಉದ್ಯಾನವನ, ಹೂವಿನ ತೋಟ, ನೀರಿನ ಕೆರೆ ಮತ್ತು ಮಹಾದ್ವಾರ ಮತ್ತು ಇತರ ಕಾಮಗಾರಿಗಳು ನಡೆಯಲಿದೆ ಎಂದರು.


ದೇವಳದ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ ಮಾತನಾಡಿ, ಈಗಾಗಲೇ ಸಮಿತಿಯ ಸದಸ್ಯರಾದ ಡಿ.ಆರ್.ರಾಜು ಮತ್ತು ಶ್ರೀನಿವಾಸ ಪೈ ಅವರು ದೇವಳದ ಸರ್ವಾಂಗೀಣ ಅಭಿವೃದ್ದಿಗೆ ಸಾಕಾಷ್ಟು ಕೊಡುಗೆ ನೀಡಿರುವುದು ಸ್ಮರಣೀಯ. ಇತರರಿಂದಲೂ ಸಹಕಾರವನ್ನು ನಾವು ನಿರೀಕ್ಷಿಸಿದ್ದು, ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ದೇವಳದ ಅಭಿವೃದ್ದಿಗೆ ನಿರಂತರ ಶ್ರಮಿಸಿದ್ದಾರೆ ಎಂದರು.

ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಕೆ.ಕೆ.ಕಾಮತ್ ಸಿ.ಎ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸೋಲೂತು ಮಠದ ಪೀಠಾಇಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕಲ್ಬುರ್ಗಿ ಚಿತ್ರಾಪುರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *