ಕಾರ್ಕಳ : ಮಿತ್ರ ಬಳಗ ಬಜಗೋಳಿ ಪ್ರಾಯೋಜಕತ್ವದಲ್ಲಿ ಫೆ.12ರಂದು ಬಜಗೋಳಿಯ ದಿಡಿಂಬಿರಿಯಲ್ಲಿ ಪುರುಷರ, ಮಹಿಳೆಯರ ಮತ್ತು 20 ವರ್ಷದ ಒಳಗಿನ ಯುವಕರ ಗ್ರಾಮೀಣ ಮಟ್ಟದ ಹಗ್ಗ ಜಗ್ಗಾಟ ನಡೆಯಿತು.
ಶೈಲೇಶ್ ವರ್ಮ ಜೈನ್, ದೀಪ ಬೆಳಗಿಸುವುದರ ಮೂಲಕ ಪಂದ್ಯಾಟ ಉದ್ಘಾಟಿಸಿದರು. ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು. ಅಶೋಕ್ ಶೆಟ್ಟಿ ಬಜಗೋಳಿ ನಿರೂಪಿಸಿದರು.
ಡಾ.ರವೀಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಅಮ್ರತಾ ಸುಹಾಸ್ ಪ್ರಭು, ಹಾಗೂ ಮುಡಾರು ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್, ಶಿವಪ್ರಸಾದ್, ಅರುಣ್ ಅರಂತೊಟ್ಟು, ಪ್ರಶಾಂತ್ ಪೂಜಾರಿ, ಮಲ್ಲಿಕಾರ್ಜುನ, ಶ್ರೀಮತಿ ವಿನಯ್ ಬಂಗೇರ, ಅನಿಲ್ ಎಸ್.ಪೂಜಾರಿ, ಅಜಿತ್ ಹೆಗ್ಡೆ, ಪದ್ಮಪ್ರಸಾದ್ ಜೈನ್, ಗಣೇಶ್ ಶಿಲ್ಪಿ, ಕರುಣಾಕರ್ ಶೆಟ್ಟಿ, ಗಣೇಶ್ ದುಗ್ಗೊಟ್ಟು, ಬಸವರಾಜ್ ಸರ್, ಮಿತ್ರ ಬಳಗದ ಕೃಷ್ಣಪ್ಪ ನಾಯರ್, ಶಿವು ಮೆಸ್ಕಾಂ ಮತ್ತು ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಉದಯರವಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಪರಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯಲ್ಲಿ ಒಟ್ಟು 22 ತಂಡಗಳು ಭಾಗವಹಿಸಿದ್ದವು. 20 ವರ್ಷದ ಒಳಗಿನ ಯುವಕರ ವಿಭಾಗದಲ್ಲಿ ಮಿತ್ರ ಬಳಗ ಬಜಗೋಳಿ ಪ್ರಥಮ ಹಾಗೂ ಡೇಂಜರ್ ಬಾಯ್ಸ್ ಮಾಳ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಮಿತ್ರ ಬಳಗ ಬಜಗೋಳಿ ಪ್ರಥಮ ಹಾಗೂ ಸ್ವಚ್ಛ ಬ್ರಿಗೇಡ್ ಬಜಗೋಳಿ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ಯಶಸ್ವಿ ಫ್ರೆಂಡ್ಸ್ ಕುಂಟಿಬೈಲು ಪ್ರಥಮ ಹಾಗೂ ಮಿತ್ರ ಬಳಗ ಬಜಗೋಳಿ ದ್ವಿತೀಯ ಸ್ಥಾನ ಪಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ನ್ರತ್ಯ ಕಾರ್ಯಕ್ರಮ ಹಾಗೂ ಪಲ್ಲವಿ ಕಲಾವಿದರು ಕಾರ್ಕಳ ತಂಡದವರಿAದ ಪನೋಡಾ ಬೊಡ್ಚಾ ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.