ಶ್ರೀಹರಿಕೋಟಾ: ಪ್ರಗ್ಯಾನ್ ರೋವರ್ ಅನ್ನು ತನ್ನ ಒಡಲಿನಲ್ಲಿ ಹೊತ್ತು ಚಂದ್ರನ ಅತ್ಯಂತ ಕಠಿಣ ಪ್ರದೇಶವಾದ ದಕ್ಷಿಣಧ್ರುವ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ನ ಸಾಫ್ಟ್ ಲ್ಯಾಂಡಿAಗ್ ಯಶಸ್ವಿಯಾಗುವ ಮೂಲಕ ಬಾಹ್ಯಾಕಾಶದಲ್ಲಿ ಭಾರತ ವಿಶ್ವಪರಾಕ್ರಮಗೈದ ದೇಶವಾಗಿದೆ ಹೊರಹೊಮ್ಮಿದೆ. ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿAಗ್ ಯಶಸ್ವಿಯಾಗಿರುವ ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಭಾರತ ಈ ಸಾಧನೆಗೈದ ವಿಶ್ವದ ನಾಲ್ಕನೇ ದೇಶವಾಗಿ ಮೂಡಿಬಂದಿದೆ. ರೋವರ್ ಹೊತ್ತಿರುವ ಲ್ಯಾಂಡರ್ ಸಂಜೆ 6.04 ನಿಮಿಷಕ್ಕೆ ಸರಿಯಾಗಿ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದಿದೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಚಂದ್ರಯಾನ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಇಡೀ ವಿಶ್ವವೇ ದೇಶದತ್ತ ತಿರುಗಿ ನೋಡುತ್ತಿವೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಚ್ ಪ್ಯಾಡ್ ನಿಂದ ಜುಲೈ 14, 2023 ರಂದು ಮಧ್ಯಾಹ್ನ 2:35 ಕ್ಕೆ ಚಂದ್ರಯಾನ -3 ಅನ್ನು ಉಡಾವಣೆ ಮಾಡಲಾಯಿತು. ಆಗಸ್ಟ್ 5, 2023 ರಂದು ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು. ಈ ನೌಕೆಯು ದೇಶೀ ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ರೋವರನ್ನು ಒಳಗೊಂಡಿದೆ. ಚಂದ್ರನ ಮೇಲ್ಮೈನ ರಾಸಾಯನಿಕ ವಿಶ್ಲೆ?ಷಣೆಗಾಗಿ ರೋವರ್ ವೈಜ್ಞಾನಿಕ ಪೇಲೋಡ್ ಅನ್ನು ಹೊಂದಿದೆ. ಇಂದು ಸಂಜೆ 6.04ಕ್ಕೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿAಗ್ ಯಶಸ್ವಿಯಾಗಿದ್ದು, ನಭೋ ಮಂಡಲದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಮೂರು ದಿನಗಳ ಅಧಿಕೃತ ಭೇಟಿಯಲ್ಲಿರುವ ದಕ್ಷಿಣ ಆಫ್ರಿಕಾದಿಂದ ವರ್ಚುವಲ್ ಆಗಿ ಲ್ಯಾಂಡಿAಗ್ ಕಾರ್ಯಕ್ರಮಕ್ಕೆ ಸೇರಿದ್ದು, ಈ ಮೂಲಕ ಅವರು ಇಂದು ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿAಗ್ ಗೆ ಸಾಕ್ಷಿಯಾದರು.ಅಲ್ಲದೇ ಮಿಶನ್ ಯಶಸ್ವಿಯಾಗಲು ಪರಿಶ್ರಮಗೈದ ಇಸ್ರೋದ ಎಲ್ಲಾ ವಿಜ್ಞಾನಿಗಳನ್ನು ಹಾಗೂ ಸಿಬ್ಬಂದಿ ವರ್ಗವನ್ನು ಮುಕ್ತಕಂಠದಿAದ ಶ್ಲಾಘಿಸಿದರು.
ಯಶಸ್ವಿ ಲ್ಯಾಂಡಿಗ್‌ಗೆ ನಡೆದಿತ್ತು ದೇಶದ ಎಲ್ಲೆಡೆ ಪ್ರಾರ್ಥನೆ: ವಿಕ್ರಮ್ ಲ್ಯಾಂಡರ್ Áಫ್ಟ್ ಲ್ಯಾಂಡಿAಗ್ ಯಶಸ್ವಿಯಾಗುವ ಸಲುವಾಗಿ ದೇಶದ ಎಲ್ಲೆಡೆ ಪ್ರಾರ್ಥನೆ ನಡೆದಿತ್ತು.,ದೇಶದ ವಿವಿಧ ಭಾಗಗಳಲ್ಲಿ ಜನರು ಮಿಷನ್ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು