ಚಿತ್ರದುರ್ಗ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುಂದಿನ ದಿನಗಳಲ್ಲಿ ಸಂಘರ್ಷವಾಗಲಿದೆ ಎಂದು ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಎರಡು ಪಕ್ಷಗಳ ಮೈತ್ರಿಯಿಂದಾಗಿ ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ದರೆ ಎರಡು ಪಕ್ಷಗಳ ಮಧ್ಯೆ ಸಂಘರ್ಷವಾಗಲಿದ್ದು,ಆದ್ದರಿಂದ ಮೈತ್ರಿ ಆಗಬಾರದು ಎಂದು ತಿಳಿಸಿದರು. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೇ ಮೋಸ ಮಾಡಿದ ವಚನಭ್ರಷ್ಟರೊಂದಿಗೆ ಮೈತ್ರಿ ಎಷ್ಟುಸರಿ ಎಂದು ಜನ ಕೇಳುತ್ತಿದ್ದಾರೆ ಎಂದ ಅವರು ಪಾರ್ಟಿಯ ಹಿರಿಯ ನಾಯಕರ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದರು.ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ನಾನೂ ಕೂಡ ಸ್ಪರ್ಧೆ ಮಾಡುವುದಕ್ಕೆ ಮನಸ್ಸು ಮಾಡಿರುವೆ ಅಂತ ತಿಳಿಸಿದರು. ಇನ್ನೂ ಬಗ್ಗೆ ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಅಂತಿಮವಾಗಿ ನಾನು ಬದ್ದವಾಗಿರುವೆ ಎಂದರು.