ಮಂಗಳೂರು: ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಸರ್ಕಸ್’ ತುಳು ಸಿನಿಮಾ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾದ ಎರಡನೇ ದಿನವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಬಿಡುಗಡೆಯಾದ ಮೊದಲ ದಿನವೇ 161 ಪ್ರದರ್ಶನ ಕಂಡು ಮುನ್ನುಗ್ಗುತ್ತಿರುವ ಸರ್ಕಸ್ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ನಗುವಿನ ರಸದೌತಣ ನೀಡುವ ಮೂಲಕ ಧೂಳೆಬ್ಬಿಸುತ್ತಿದೆ.
ಈಗಾಲೇ ಉಡುಪಿ,ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸರ್ಕಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರ್ದೇಶಕ ರಾಕೇಶ್ ಶೆಟ್ಟಿ ನೇತೃತ್ವದ ಚಿತ್ರತಂಡ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾದ ಯಶಸ್ಸಿಗೆ ಪ್ರೇಕ್ಷಕರ ಸಹಕಾರ ಕೋರಿದ್ದು ಚಿತ್ರದ ಕುರಿತು ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಸರ್ಕಸ್ ಚಿತ್ರವು ಅತ್ಯುತ್ತಮ ಹಾಸ್ಯಮಯ ಚಿತ್ರವಾಗಿದ್ದು ನೂರು ದಿನ ಯಶಸ್ವೀಯಾಗಿ ಪ್ರದರ್ಶನವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಿರಿಗಿಟ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಾಕೇಶ್ ಶೆಟ್ಟಿ ಸರ್ಕಸ್ ಸಿನಿಮಾದ ಮೂಲಕ ತುಳುಚಿತ್ರರಂಗದಲ್ಲಿ ಭರ್ಜರಿ ಹವಾ ಎಬ್ಬಿಸಿದ್ದು ಪ್ರೇಕ್ಷಕರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.