Share this news

ಕಾರ್ಕಳ:ಸಾವು ಎನ್ನುವುದು ಯಾರಿಗೆ ಯಾವ ರೂಪದಲ್ಲಿ ವಕ್ಕರಿಸುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ.ಊಟ ಮಾಡುವಾಗ ಯಮ‌ನೂ ಕಾಯುತ್ತಾನೆ ಎನ್ನುವ ಗಾದೆ ಮಾತಿನಂತೆ ಕಾಕತಾಳೀಯ ಎಂಬಂತೆ ಊಟ ಮಾಡಿದ ಬಳಿಕ ತಟ್ಟೆ ತೊಳೆಯಲು ಹೋದ ಮಹಿಳೆಯೊಬ್ಬರ ಮೇಲೆ ನೀರಿನ ಟ್ಯಾಂಕ್ ಕುಸಿದುಬಿದ್ದು ಆಕೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿ ಸಂಭವಿಸಿದೆ.
ನಂದಳಿಕೆ ಗ್ರಾಮದ ಮಹಮ್ಮಾಯಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಜ.30 ರಂದು ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು,ಬೆಳ್ಮಣ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಲತಾ (50) ಎಂಬವರು ಟ್ಯಾಂಕ್ ಕುಸಿದು ದಾರುಣವಾಗಿ ಮೃತಪಟ್ಟ ದುರ್ದೈವಿ.
ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಮಾರಿಪೂಜೆಗೆ ಶ್ರೀಲತಾ ತನ್ನ ಮಗಳು ಪೂಜಾ ಜತೆ ತೆರಳಿದ್ದರು. ಪೂಜೆಯ ಬಳಿಕ ಇತರೇ ಭಕ್ತರ ಜತೆ ಶ್ರೀಲತಾ ಹಾಗೂ ಪೂಜಾ ಊಟ ಮಾಡಿ ತಟ್ಟೆ ತೊಳೆಯಲು ಹೋದವೇಳೆ ಶಿಥಿಲಾವಸ್ಥೆಯಲ್ಲಿದ್ದ ನೀರಿನ ಓವರ್ ಹೆಡ್ ಟ್ಯಾಂಕ್ ಏಕಾಎಕಿ ಕುಸಿದು ಶ್ರೀಲತಾ ಹಾಗೂ ಅವರ ಮಗಳು ಪೂಜಾ ಅವರ ಮೇಲೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಶ್ರೀಲತಾ ಸ್ಥಳದಲ್ಲೇ ಮೃತಪಟ್ಟು, ಮಗಳು ಪೂಜಾ ಅವರಿಗೆ ಗಂಭೀರ ಗಾಯಗಳಾಗಿವೆ.
ಈ ದುರ್ಘಟನೆಯಿಂದ ತೀವೃ ಗಾಯಗೊಂಡ ಶ್ರೀಲತಾ ಅವರನ್ನು ಅಂಬುಲೆನ್ಸ್ ವಾಹನದಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟಿದ್ದು,ಪೂಜಾ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀಯತೆ ಮೆರೆದ ಆಪತ್ಭಾಂಧವ ಸುಪ್ರೀತ್ ಶೆಟ್ಟಿ:

ಶ್ರೀಲತಾ ಗಂಭೀರ ಗಾಯಗೊಂಡ ವಿಷಯ ತಿಳಿದ ತಕ್ಷಣವೇ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಪ್ರೀತ್ ಶೆಟ್ಟಿ ಕೆದಿಂಜೆ ಅವರು ಆಂಬುಲೆನ್ಸ್ ನೊಂದಿಗೆ ತಕ್ಷಣವೇ ಸ್ಥಳಕ್ಕಾಗಮಿಸಿದ್ದರು.ಆದರೆ ಆಸ್ಪತ್ರೆ ಸೇರಿಸುವ ಮೊದಲೇ ಶ್ರೀಲತಾರವರು ಮೃತಪಟ್ಟಿದ್ದಾರೆ.

 
 

 

 
 

 
 

 

 
 

Leave a Reply

Your email address will not be published. Required fields are marked *