ಬೆಂಗಳೂರು:ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ರಾಜ್ಯದ 63 ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬೆಸ್ಕಾಂ ಜಾಗೃತ ದಳದ ಅಧಿಕಾರಿ ಸುಧಾಕರ್ ರೆಡ್ಡಿ ಬೆಂಗಳೂರಿನ ಮನೆ, ಚಿಂತಾಮಣಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸುಧಾಕರ್ಗೆ ಸೇರಿದ ಐದು ಕಡೆ ದಾಳಿ ನಡೆದಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ ಮನೆಯಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೂವರು ಲೋಕಾಯುಕ್ತ ಅಧಿಕಾರಿಗಳಿಂದ ಸತತ ಪರಿಶೀಲನೆ ನಡೆಸುತ್ತಿದ್ದಾರೆ. ಕೆ.ಆರ್.ಸರ್ಕಲ್ ನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಿಜಿಲೇನ್ಸ್ ಡಿಜಿಎಂ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ರೆಡ್ಡಿ ಅಕ್ರಮ ಆಸ್ತಿ ಹಿನ್ನೆಲೆ ದಾಳಿ ನಡೆದಿದೆ.
ಎಚ್ ಎಸ್ ಕೃಷ್ಣಮೂರ್ತಿ, ಕಣ್ಮಿಣಿಕೆ ಹಾಲು ಉತ್ಪಾದಕರ ಸಹಕಾರ ಸಂಘ, ಕುಂಬಳಗೋಡು, ಬೆಂಗಳೂರು ದಕ್ಷಿಣ:
ಕುಂಬಳಗೋಡು ಹಾಲು ಸಹಕಾರ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಎಸ್ ಕೃಷ್ಣಮೂರ್ತಿ ಮನೆ ಮೇಲೆ ದಾಳಿ ನಡೆದಿದೆ. ಕುಂಬಳಗೂಡು ಸೇರಿದಂತೆ 5 ಕಡೆ ಲೋಕಾ ದಾಳಿ ನಡೆದಿದೆ.
ಯಾದಗಿರಿ DHO ಪ್ರಭುಲಿಂಗ ಮಾನಕರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಯಾದಗಿರಿಯಲ್ಲಿರುವ ಬಾಡಿಗೆ ಮನೆ ಮತ್ತು ಅವರದೇ ಕಲಬುರಗಿಯ ಕರುಣೇಶ್ವರ ನಗರದಲ್ಲಿನ ಮನೆ, ಗೊಬ್ಬೂರ ಬಳಿಯ ಫಾರ್ಮ ಹೌಸ್, ಯಾದಗಿರಿ ನಗರದ ಬಾಡಿಗೆ ಮನೆ ಮೇಲೂ ದಾಳಿಯಾಗಿದೆ. ದಾಳಿ ವೇಳೆಯಲ್ಲಿ 300 ಗ್ರಾಂ ಚಿನ್ನಾಭರಣ 3 ಲಕ್ಷ ನಗದು ಹಣ ಪತ್ತೆಯಾಗಿದೆ. ದಾಳಿ ವೇಳೆ ಕಲಬುರಗಿ ನಗರದ ವರ್ಧಾ ಲೇಔಟ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಪ್ರಭುಲಿಂಗ್ ಮಾನಕರ್ ಇದ್ದರು. ಬೀದರ ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ HD ನಾರಾಯಣಸ್ವಾಮಿಯ ಬೆಂಗಳೂರಿನ ರಾಜೀವಗಾಂಧಿ ನಗರದಲ್ಲಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅದೇ ರೀತಿ ನಿವೃತ್ತ ವಿಸಿ ನಾರಾಯಣಸ್ವಾಮಿ ಸಹಾಯಕರಾಗಿದ್ದ ಸುನೀಲ್ ಕುಮಾರ ಅವರ ಬೀದರ ಮನೆ ಹಾಗೂ ಕಾಂಪ್ಲೆಕ್ಷ ಮೇಲೆ ದಾಳಿ ನಡೆದಿದೆ. ಕಲಬುರಗಿ ಎಸ್ಪಿ ಕರ್ನೂಲ್ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, ಆರು ಜನ ಸರ್ಕಲ್ ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಯಿಂದ ಒಟ್ಟು ನಾಲ್ಕು ಕಡೆ ದಾಳಿ ನಡೆದಿದ್ದು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಮಿಂಚಿನ ದಾಳಿ, ಆಸ್ತಿ ಪಾಸ್ತಿ ದಾಖಲೆ ಪರಿಶೀಲನೆ ನಡೆಯುತ್ತಿದೆ.
ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವ ಸ್ವಾಮಿ M S ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಮಹದೇವಗೆ ಸೇರಿದ 10 ಸ್ಥಳಗಳಲ್ಲಿ ಲೋಕಾ ಶೋಧ ನಡೆದಿಸಿದ್ದು ಮೈಸೂರು ನಗರದಲ್ಲೇ 7 ಕಡೆಗಳಲ್ಲಿ ಶೋಧ. ನಂಜನಗೂಡು ಹಾಗೂ ಇತರ ಕಡೆ ಸೇರಿ ಒಟ್ಟು 10 ಕಡೆಗಳಲ್ಲಿ ಲೆಕ್ಕಪತ್ರ ತಪಾಸಣೆ ಮಾಡಲಾಗಿದೆ. ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕ. ಮಾಡೊದೆಲ್ಲ ಕಳ್ಳ ವ್ಯವಹಾರ.ವರ್ಗಾವಣೆ ದಂದೆ, ವಂಚನೆ ವಿಚಾರದಲ್ಲಿ ದೂರು ಬಂದ ಹಿನ್ನಲೆ ಮನೆ, ಕಚೇರಿ, ಶಾಲೆ, ವಾಣಿಜ್ಯ ಕಟ್ಟಡ ಹಾಗೂ ಸಂಬಂಧಿಕರ ಮನೆಯಲ್ಲಿ ಶೋಧ. ಮಹದೇವಸ್ವಾಮಿಗೆ ಸೇರಿದ ಮೈಸೂರಿನ ಗುರುಕುಲ ವಿದ್ಯಾಸಂಸ್ಥೆ, ಮೂರಕ್ಕೂ ಹೆಚ್ಚು ಸ್ಟೀಲ್ ಅಂಗಡಿಗಳು ಹಾಗೂ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿ. ವರ್ಗಾವಣೆ ವಿಚಾರವಾಗಿ ಈತನ ವಿರುದ್ಧ ಲೋಕಾಯುಕ್ತರಿಗೆ ದೂರು ಹೋಗಿತ್ತು.
ಕೆಆರ್ಐಡಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್ ತಿಮ್ಮರಾಜಪ್ಪ ಮನೆ ಮೇಲೆ ದಾಳಿ ನಡೆದಿದ್ದು ಬೆಳಗಾವಿಯ ಶಿವಬಸವನಗರದಲ್ಲಿ ತಿಮ್ಮರಾಜಪ್ಪ ಅವರ ನಿವಾಸವಿದೆ. ಬೆಳಗಾವಿ ಲೋಕಾಯುಕ್ತ ಡಿವೈಎಸ್ಸಿ ಭರತರೆಡ್ಡಿ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ. ಜಯನಗರ ಉಪವಿಭಾಗ ಇಇ ಬೆಸ್ಕಾಂ ಚೆನ್ನಕೇಶವ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಅಮೃತಹಳ್ಳಿ ಜಕ್ಕೂರು ಬಳಿ ಇರುವ ಮನೆಗೆ ಮೂರು ವಾಹನದಲ್ಲಿ ಬಂದಿರುವ 13 ಜನ ಅಧಿಕಾರಿಗಳಿಂದ ಪರಿಶೋಧನೆ ನಡೆಯುತ್ತಿದ್ದು, ದಾಳಿಯಲ್ಲಿ 6 ಲಕ್ಷ ನಗದು, 3ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್ ಜುವೆಲರಿ, ಸೇರಿ ಆಸ್ತಿ ಪತ್ರ ಸೇರಿದಂತೆ ಒಟ್ಟು 1.5 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ.
ಕೊಪ್ಪಳದ ಗಂಗಾವತಿಯಲ್ಲಿ ಸಹ ಲೋಕಾಯುಕ್ತ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ ಪರಿಸರ ಅಭಿಯಂತರ ಶರಣಪ್ಪ ಮನೆ ಮೇಲೆ ದಾಳಿ ನಡೆದಿದ್ದು, ಗಂಗಾವತಿ ನಗರದ ಶಿಕ್ಷಕರ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆದಿದೆ.
ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ ಜೊತೆಗೆ ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಮನೆ ಮೇಲೆ ದಾಳಿ ನಡೆದಿದೆ. ಮೂಲತಃ ಕೊಪ್ಪಳದವರು ಬಳ್ಳಾರಿ ಹೊಸಪೇಟೆ ಮತ್ತು ಚಿತ್ರದುರ್ಗದಲ್ಲಿ ಕೆಲಸ ಮಾಡಿದ್ದಾರೆ. ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಇವರು ಅಪಾರ ಅಕ್ರಮ ಆಸ್ತಿ ಮಾಡಿದ್ದಾರೆ ಎನ್ನಲಾಗಿದೆ. ಮರಳು ಗಣಿಗಾರಿಕೆಗೆ ಅನಧಿಕೃತ ಪರವಾನಿಗೆ ನೀಡ್ತಿದ್ದಾರೆ ಎನ್ನುವ ಆರೋಪವಿತ್ತು.
ಬೀದರ ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ HD ನಾರಾಯಣಸ್ವಾಮಿಯ ಬೆಂಗಳೂರಿನ ರಾಜೀವಗಾಂಧಿ ನಗರದಲ್ಲಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅದೇ ರೀತಿ ನಿವೃತ್ತ ವಿಸಿ ನಾರಾಯಣಸ್ವಾಮಿ ಸಹಾಯಕರಾಗಿದ್ದ ಸುನೀಲ್ ಕುಮಾರ ಅವರ ಬೀದರ ಮನೆ ಹಾಗೂ ಕಾಂಪ್ಲೆಕ್ಷ ಮೇಲೆ ದಾಳಿ ನಡೆದಿದೆ. ಕಲಬುರಗಿ ಎಸ್ಪಿ ಕರ್ನೂಲ್ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, ಆರು ಜನ ಸರ್ಕಲ್ ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಯಿಂದ ಒಟ್ಟು ನಾಲ್ಕು ಕಡೆ ದಾಳಿ ನಡೆದಿದ್ದು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಮಿಂಚಿನ ದಾಳಿ, ಆಸ್ತಿ ಪಾಸ್ತಿ ದಾಖಲೆ ಪರಿಶೀಲನೆ ನಡೆಯುತ್ತಿದೆ
ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳ ಮನೆ, ಕಚೇರಿಗಳು, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.