Share this news

ಕಾರ್ಕಳ: ತಾಲೂಕಿನ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೈಲೂರು ಗಾಂಧಿ ಸ್ಮಾರಕ ಭವನ 1952 ರಲ್ಲಿ ಆಗಿನ ದಾನಿಗಳ ದೇಣಿಗೆಯಿಂದ ನಿರ್ಮಾಣವಾಗಿದ್ದು ಇದನ್ನು ಯಥಾಸ್ಥಿತಿ ಉಳಿಸುವಂತೆ ಸಾರ್ವಜನಿಕರು ಅ. 6ರಂದು ನೀರೆ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭುರವರಿಗೆ ಮನವಿ ನೀಡಿದರು.

ಸುಮಾರು 71 ವರ್ಷಗಳಿಂದ ಈ ಕಟ್ಟಡವು ಸುಸ್ಥಿತಿಯಲ್ಲಿದ್ದು ಹಲವಾರು ಸಾರ್ವಜನಿಕ ಪೂರಕವಾದ ಕಾರ್ಯಕ್ರಮಗಳು ನಡೆಯುತ್ತಿವೆ. ಇದರೊಂದಿಗೆ ಪಶು ವೈದ್ಯಕೀಯ ಶಿಬಿರ, ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ನಾಯಿಗಳಿಗೆ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳು ಇಲ್ಲಿ ನಡೆದಿದೆ. ಅಲ್ಲದೆ ಬೈಲೂರು, ಕೌಡೂರು , ನೀರೆ. ಯರ್ಲಪಾಡಿ, ಕಣಂಜಾರು ಗ್ರಾಮಗಳ ಸಾರ್ವಜನಿಕರು ಸೇರಿಕೊಂಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚಿಸಿಕೊಂಡು ಆ ಮೂಲಕ ಸುಮಾರು 43 ವರ್ಷಗಳಿಂದ ನಿರಂತರ ಎರಡು ದಿನಗಳ ಕಾಲ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನೂ ಆಚರಿಸುತ್ತಿದ್ದಾರೆ. ಆದರೆ ಇದೀಗ ಈ ಸ್ಮಾರಕ ಭವನವನ್ನು ನೀರೆ ಗ್ರಾಮ ಪಂಚಾಯತ್ ಏಕಾಏಕಿ ಕೆಡವಿ ಹೊಸ ಪಂಚಾಯತ್ ಕಚೇರಿಯನ್ನು ನಿರ್ಮಿಸುವ ನಿರ್ಣಯ ಕೈಗೊಂಡಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.

ಈ ಹಿನ್ನಲೆಯಲ್ಲಿ ಸ್ಮಾರಕ ಭವನವನ್ನು ಯಾವುದೇ ಕಾರಣಕ್ಕೂ ಕೆಡವದೆ ಅದರ ಮೇಲ್ಛಾವಣಿಯನ್ನು ದುರಸ್ಥಿಗೊಳಿಸಿ ಯಥಾಸ್ಥಿತಿ ಈ ಕಟ್ಟಡವನ್ನು ಉಳಿಸಿಕೊಂಡು ಹಾಗೂ ಇದಕ್ಕೆ ಹೊಂದಿಕೊAಡಿರುವ ಖಾಲಿ ಸ್ಥಳವನ್ನು ಸಾರ್ವಜನಿಕರಿಗೆ ಈ ಹಿಂದಿನAತೆಯೇ ಉಪಯೋಗಕ್ಕೆ ಅವಕಾಶ ಮಾಡಿಕೊಡುವಂತೆ ಗಣೇಶೋತ್ಸವ ಸಮಿತಿ ಸದಸ್ಯರು ಹಾಗೂ ಗ್ರಾಮಶ್ಥರು ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗಣೇಶೋತ್ಸವ ಮಿತಿಯ ಅಧ್ಯಕ್ಷ ಜಗದೀಶ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಕೃಷ್ಣ ಶೆಟ್ಟಿ, ಸಚ್ಚಿದಾನಂದ ಪ್ರಭು, ಗುರುರಾಜ ಮಾಡ, ಮಹೇಶ್ ಮಾಡ, ಸುಧೀರ್ ಶೆಟ್ಟಿ, ಸುರೇಶ್ ಶೆಟ್ಟಿ, ಸ್ಥಳೀಯರಾದ ದಿಲೀಪ್ ಶೆಟ್ಟಿ, ಮಹಾವೀರ್ ರಾಣೆ, ರಾಜೇಂದ್ರ ಶೆಟ್ಟಿ, ನವೀನ್ ಭಂಡಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

 

 

 

 

 

 

 

Leave a Reply

Your email address will not be published. Required fields are marked *