ಕಾರವಾರ:ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಸಿಕ್ಕಿದ್ದು, ಭಟ್ಕಳದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಹೀಗಾಗಿ ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದಲ್ಲದೆ, ಕೇಸರಿ ಧ್ವಜದ ಪಕ್ಕ ಅದನ್ನು ಅಳವಡಿಸಿದ್ದಾರೆ. ಭಟ್ಕಳ ಸಂಶುದ್ದಿನ್ ಸರ್ಕಲ್ ಮೇಲೆ ನಿಂತು ಕೇಸರಿ ಭಾವುಟ ಪಕ್ಕದಲ್ಲಿ ಇಸ್ಲಾಂ ಪ್ಲ್ಯಾಗ್ ಹಿಡಿದು ಸಂಭ್ರಮಾಚರಣೆ ನಡೆಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶವೂ ವ್ಯಕ್ತವಾಗುತ್ತಿದೆ.
ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಬಿಜೆಪಿಯ ಸುನೀಲ್ ನಾಯ್ಕ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಮಂಕಾಳು ವೈದ್ಯ ಗೆಲುವನ್ನ ಸಂಭ್ರಮಿಸುವ ವೇಳೆ ಭಟ್ಕಳ ಪಟ್ಟಣದಲ್ಲಿರುವ ಸಂಶುದ್ದೀನ್ ವೃತ್ತದ ಮೇಲೇರಿದ ಮುಸ್ಲಿಂ ಯುವಕರು ಕೇಸರಿ ಧ್ವಜದ ಪಕ್ಕ ನಿಂತು ಇಸ್ಲಾಂ ಧ್ವಜ ಪ್ರದರ್ಶನ ಮಾಡಿದ್ದಾರೆ.
ಇದರ ಜೊತೆಗೆ ಮಂಕಾಳು ವೈದ್ಯ ಭಾವಚಿತ್ರವಿರುವ ಧ್ವಜ, ಅಂಬೇಡ್ಕರ್‌ರ ಧ್ವಜದೊಂದಿಗೆ ಮುಸ್ಲಿಂ ಧ್ವಜ ಪ್ರದರ್ಶನ ಮಾಡಿ ವೃತ್ತದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜದ ಪಕ್ಷದಲ್ಲೇ ಮುಸ್ಲಿಂ ಧ್ವಜ ಹಾಕಿದ್ದಾರೆ. ಸದ್ಯ ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಹಿಂದೂಗಳ ಹೆಣ ಎತ್ತಲೂ ಯಾರು ಇರಬಾರದು: ಮುಸ್ಲಿಂ ಯುವಕನಿಂದ ಅಘಾತಕಾರಿ ಕಾಮೆಂಟ್
ಕಾಂಗ್ರೆಸ್ಗೆ ಬಹುಮತ ಬಂದಿದ್ದೇ ತಡ, ಇದರ ಸಂತೋಷಕ್ಕೆ ಭಟ್ಕಳದಲ್ಲಿ ಇಸ್ಲಾಂ ಧ್ವಜ ಹಾರಿಸಲಾಯಿತು. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಮಾಜಘಾತುಕ ಸಂದೇಶಗಳನ್ನು ರವಾನಿಸಲಾಗುತ್ತಿದೆ. “ಹಿಂದೂಗಳ ಹೆಣ ಎತ್ತಲೂ ಯಾರೂ ಇರಬಾರದು. ಕರ್ನಾಟಕದಲ್ಲಿ ಇನ್ನು ಮುಂದೆ ಮುಸ್ಲಿಂ ಹವಾ, ಅಲ್ಲಾಹು ಅಕ್ಬರ್” ಮುಸ್ಲಿಂ ಯುವಕನೊಬ್ಬ ಮಾಡಿದ ಕಾಮೆಂಟ್ನ ಸ್ಕ್ರೀನ್ಶಾಟ್ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.